ಭಾರತೀಯ ಯೋಧರಿಗೆ ವಯನಾಡಿನಲ್ಲಿ ಹೃದಯಸ್ಪರ್ಶಿ ಬೀಳ್ಕೊಡುಗೆ

Sampriya

ಶುಕ್ರವಾರ, 9 ಆಗಸ್ಟ್ 2024 (15:28 IST)
Photo Courtesy X
ಕೇರಳ:  ಭೀಕರ ಭೂಕುಸಿತ ಸಂಭವಿಸಿದ ಕೇರಳದ ವಯನಾಡಿನಲ್ಲಿ ಕಳೆದ 10 ದಿನಗಳಿಂದ ರಕ್ಷಣಾ ಕಾರ್ಯಚರಣೆಯಲ್ಲಿ ತೊಡಗಿದ್ದ  ಭಾರತೀಯ ಸೇನೆಯ ಸಿಬ್ಬಂದಿಗಳಿಗೆ ಇಂದು ಹೃದಯಸ್ಪರ್ಶಿಯಾಗಿ ಬೀಳ್ಕೊಡಲಾಯಿತು.

ಈ ವೇಳೆ ಕೊಚ್ಚಿ ರಕ್ಷಣಾ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಾತನಾಡಿ, ಸೈನಿಕರು ಪ್ರದರ್ಶಿಸಿದ ಶೌರ್ಯ ಮತ್ತು ನಿಸ್ವಾರ್ಥತೆಗೆ ಆಳವಾದ ಶ್ಲಾಘನೆಯನ್ನು ವ್ಯಕ್ತಪಡಿಸಿದರು.

 'ಭೂಕುಸಿತ ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ ಎಲ್ಲವನ್ನೂ ಪಣಕ್ಕಿಟ್ಟ ನಮ್ಮ ವೀರ ವೀರರಿಗೆ ನಾವು ತುಂಬಾ ಕೃತಜ್ಞರಾಗಿರುತ್ತೇವೆ... ನಿಮ್ಮ ಧೈರ್ಯ ಮತ್ತು ತ್ಯಾಗಕ್ಕೆ ಜಯವಿದೆ. ಮರೆಯಬಾರದು."

ಸೇನಾ ಪಡೆ ವಯನಾಡನಿಂದ ಹೊರಡುತ್ತಿದ್ದ ಹಾಗೇ ಸ್ಥಳೀಯರು 'ಭಾರತ್ ಮಾತಾ ಕಿ ಜೈ' ಮತ್ತು 'ಇಂಡಿಯನ್ ಆರ್ಮಿ ಕಿ ಜೈ' ಘೋಷಣೆಗಳೊಂದಿಗೆ ಅವರನ್ನು ಬೀಳ್ಕೊಟ್ಟರು.

ಜುಲೈ 30 ರಂದು ವಯನಾಡಿನ ಚೂರಲ್ಮಲಾ ಮತ್ತು ಮುಂಡಕ್ಕೈನಲ್ಲಿ ಸಂಭವಿಸಿದ ಭಾರೀ ಭೂಕುಸಿತಕ್ಕೆ 300ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, ಇನ್ನೂ ಹಲವು ಮಂದಿ ನಾಪತ್ತೆಯಾಗಿದ್ದಾರೆ. ಅಪಾರ ಪ್ರಮಾಣ ಪ್ರಾಣ ಹಾನಿಯೊಂದಿಗೆ , ಮನೆ ಹಾನಿಯಾಗಿದೆ. ಈ ವೇಳೆ ಸ್ಥಳಕ್ಕೆ ಆಗಮಿಸಿದ ಭಾರತದ ಸೇನಾ ಪಡೆ ನಿರಂತರ 10 ದಿನಗಳ ಕಾಲ ಶೋಧ ಕಾರ್ಯ ಮತ್ತು ರಕ್ಷಣಾ ಕಾರ್ಯದಲ್ಲಿ ರಾತ್ರಿ ಹಗಲು ಎನ್ನದೇ ಕಾರ್ಯ ನಿರ್ವಹಿಸಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ