ಕೈಕೊಟ್ಟ ಪ್ರಿಯತಮೆಗೆ ವಿಷ ಉಣಿಸಿದ ಪ್ರಿಯಕರ

ಶುಕ್ರವಾರ, 8 ಡಿಸೆಂಬರ್ 2023 (12:24 IST)
ಕಾಲೇಜಿನಲ್ಲಿ ಎಂಬಿಎ ಓದುತ್ತಿದ್ದ ಕವಿತ ಮತ್ತು ಬಾಲಕೃಷ್ಣ ಪರಸ್ಪರ ಪ್ರೇಮಿಸುತ್ತಿದ್ದರು. ಆದ್ರೆ ಈ ಪ್ರೀತಿ ಗೊತ್ತಿಲ್ಲದೇ ಕವಿತ ಮನೆಯವರು ಮಗದೊಬ್ಬ ಹುಡುಗನೊಂದಿಗೆ ಮದುವೆಯನ್ನು ನಿಶ್ಚಯಿಸಿದ್ದರು. ಅಪ್ಪ ಅಮ್ಮನ ಮಾತಿಗೆ ವಿರೋಧ ತೋರದ ಕವಿತ ಮದುವೆಗೆ ಸಮ್ಮತಿ ಸೂಚಿಸಿದ್ದಳು. ಇದರಿಂದ ಕೆರಳಿದ ಪ್ರಿಯಕರ ವಿಷ ಉಣಿಸಿದ ಘಟನೆ ವರದಿಯಾಗಿದೆ.
 
ಪ್ರೀತಿಸಿ ಮದುವೆಯಾಗದೆ ಬೇರೊಂದು ಹುಡುಗನ ಜೊತೆಗೆ ಮದುವೆಯಾಗಲು ತಯಾರಾದ ಮಧುವಣಗಿತ್ತಿಗೆ ಪ್ರಿಯಕರನೇ ವಿಷ ಉಣಿಸಿದ ಘಟನೆ ದೇವರಕೊಂಡ ಹಳ್ಳಿಯಲ್ಲಿ ನಡೆದಿದೆ.
 
ಕವಿತಾಳ ನಿರ್ಧಾರದಿಂದ ಬೇಸತ್ತ ಭಗ್ನ ಪ್ರೇಮಿ ಬಾಲಕೃಷ್ಣ ಆಕೆಯನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಾನೆ. ಏನೋ ಮಾತನಾಡಬೇಕು ಎಂದು ಕವಿತಾಳನ್ನು ಅರಣ್ಯಪ್ರದೇಶಕ್ಕೆ ಕರೆದುಕೊಂಡು ಹೋದ ಬಾಲಕೃಷ್ಣ, ಪ್ರಿಯತಮೆ ಕವಿತಾಗೆ ಬಲವಂತವಾಗಿ ವಿಷ ಕುಡಿಸಿದ್ದಾನೆ.
 
ವಿಷ ಕುಡಿದ ಕವಿತ ಪ್ರಜ್ಞೆ ಕಳೆದುಕೊಂಡು ಅರಣ್ಯದಲ್ಲಿಯೇ ಬಿದ್ದಿದ್ದಳು. ಆಗ ಕವಿತ ಸತ್ತೇ ಹೋಗಿದ್ದಾಳೆ ಎಂದು ಭಾವಿಸಿದ ಬಾಲಕೃಷ್ಣ ಅಲ್ಲಿಂದ ಓಡಿ ಹೋಗಿದ್ದಾನೆ. ನಂತರ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಕವಿತಾಳನ್ನು ಯಾರೋ ಸ್ಥಳೀಯ ಆಸ್ಪತ್ರೆಗೆ ಸೇರಿಸಿದ್ದಾರೆ.
 
ನಂತರ ಪರಿಚಿತರೊಬ್ಬರು ಆಕೆಯನ್ನು ಗುರ್ತಿಸಿ, ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪ್ರಿಯತಮೆಯನ್ನೇ ಕೊಲೆ ಮಾಡಲು ಯತ್ನಿಸಿದ್ದ ಬಾಲಕೃಷ್ಣನನ್ನು ಇದೀಗ ಪೋಲೀಸರು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ