ಪತಿಯ ದೇಹದ ವಾಸನೆ ಸಹಿಸದೆ ಆತನಿಗೆ ವಿಚ್ಛೇದನ ನೀಡಲು ಮುಂದಾದ ಪತ್ನಿ
ಸೋಮವಾರ, 13 ಜನವರಿ 2020 (06:36 IST)
ಪಾಟ್ನಾ : ಪತಿಯ ದೇಹದಿಂದ ಬರುತ್ತಿದ್ದ ವಾಸನೆ ಸಹಿಸಿಕೊಳ್ಳಲಾರದೆ ಪತ್ನಿಯೊಬ್ಬಳು ಆತನಿಂದ ವಿಚ್ಛೇದನ ಪಡೆದುಕೊಳ್ಳಲು ಮುಂದಾದ ಘಟನೆ ಬಿಹಾರದಲ್ಲಿ ನಡೆದಿದೆ.
ಸೋನಿ ದೇವಿ(20) ವಿಚ್ಛೇದನ ನೀಡಲು ಮುಂದಾದ ಪತ್ನಿ, ಈಕೆ ಮನೀಶ್(23) ಎಂಬ ಯುವಕನ ಜೊತೆ ಮದುವೆಯಾಗಿದ್ದು, ಆದರೆ ಆತ ಪ್ರತಿದಿನ ಸ್ನಾನ , ಹಲ್ಲುಜ್ಜುವ ಕ್ರಿಯೆ ಮಾಡುತ್ತಿರಲಿಲ್ಲ. ಇದರಿಂದ ಆತ ವಿಪರೀತ ವಾಸನೆ ಬರುತ್ತಿದ್ದು, ಆತನೊಂದಿಗೆ ನನಗೆ ಜೀವನ ನಡೆಸಲು ಸಾಧ್ಯವಿಲ್ಲ ಎಂದು ಪತ್ನಿ ಆತನಿಂದ ವಿಚ್ಛೇದನ ಕೊಡಿಸುವಂತೆ ರಾಜ್ಯ ಮಹಿಳಾ ಆಯೋಗಕ್ಕೆ ಮನವಿ ಮಾಡಿದ್ದಾಳೆ.
ಆದರೆ ಮಹಿಳಾ ಆಯೋಗ ಕ್ಷುಲಕ ಕಾರಣಕ್ಕೆ ಡಿವೋರ್ಸ್ ಕೊಡಿಸಲು ಸಾಧ್ಯವಿಲ್ಲ. ಆದ್ದರಿಂದ ಶುಚಿತ್ವ ಕಾಪಾಡಿಕೊಳ್ಳುವಂತೆ ಪತಿಗೆ ಎಚ್ಚರಿಕೆ ನೀಡಿ ನೀಡಿ ಕಳುಹಿಸಿದ್ದಾರೆ ಎನ್ನಲಾಗಿದೆ.