ಕಸ ಗುಡಿಸುತ್ತಿದ್ದ ಮಹಿಳೆ ಈಗ ಡೆಪ್ಯುಟಿ ಕಲೆಕ್ಟರ್!

ಶುಕ್ರವಾರ, 16 ಜುಲೈ 2021 (09:30 IST)
ಜೈಪುರ: ಇಂದು ಆಳಾಗಿದ್ದವನು ಮುಂದೊಂದು ದಿನ ಅರಸನಾಗಬಹುದು ಎಂಬ ಮಾತಿದೆಯಲ್ಲ? ಅದನ್ನೇ ಇಲ್ಲೊಬ್ಬ ಮಹಿಳೆ ಸಾಬೀತುಪಡಿಸಿದ್ದಾಳೆ.

 
ರಾಜಸ್ಥಾನದ ಜೋಧ್ ಪುರ ಮಹಾನಗರ ಪಾಲಿಕೆಯಲ್ಲಿ ಕಸ ಗುಡಿಸುವ ಕೆಲಸ ಮಾಡುತ್ತಿದ್ದ ಮಹಿಳೆ ಆಶಾ ಕಂಧಾರಾ ತನ್ನ ಸ್ವಂತ ಪರಿಶ್ರಮದಿಂದ ಓದಿ ಸಿವಿಲ್ ಸರ್ವಿಸ್ ಪರೀಕ್ಷೆ ಪಾಸ್ ಮಾಡಿಕೊಂಡಿದ್ದಾರೆ. ಇದೀಗ ಆಕೆ ಉಪ ಜಿಲ್ಲಾಧಿಕಾರಿಯಾಗಿ ನೇಮಕವಾಗುತ್ತಿದ್ದಾರೆ.

ಎಂಟು ವರ್ಷಗಳ ಹಿಂದೆ ಆಕೆ ಗಂಡನಿಂದ ದೂರವಾಗಿದ್ದರು. ಈ ನಡುವೆ ತನ್ನಿಬ್ಬರು ಮಕ್ಕಳ ಜವಾಬ್ಧಾರಿ ಜೊತೆಗೆ ಪದವಿಯನ್ನೂ ಮುಗಿಸಿದ್ದರು. ಎರಡು ವರ್ಷಗಳ ಹಿಂದೆ ಈಕೆ ನಾಗರಿಕ ಸೇವಾ ಪರೀಕ್ಷೆ ಬರೆದಿದ್ದರು. ಆದರೆ ಫಲಿತಾಂಶ ತಡವಾಗಿತ್ತು. ಆದರೆ ಇದೀಗ ಎಲ್ಲರೂ ಬೆರಗಾಗುವಂತೆ ಉತ್ತಮ ಅಂಕಗಳೊಂದಿಗೆ ಪರೀಕ್ಷೆ ಪಾಸ್ ಮಾಡಿಕೊಂಡಿದ್ದಾಳೆ. ಇದೀಗ ತನ್ನ ಈ ಸಾಧನೆಗೆ ತನ್ನ ಕುಟುಂಬವೇ ಕಾರಣ ಎಂದು ಆಶಾ ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ