ನವದೆಹಲಿ : ಜಿ20 ಒಕ್ಕೂಟ ರಾಷ್ಟ್ರಗಳ ಪಟ್ಟಿಗೆ ಆಫ್ರಿಕನ್ ಯೂನಿಯನ್ ಸೇರ್ಪಡೆಯಾಗಿದ್ದು ಈ ಮೂಲಕ ದೆಹಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು.
ಜಿ20 ಅಧ್ಯಕ್ಷ ರಾಷ್ಟ್ರ ಭಾರತದ ಪ್ರಧಾನಿ ನರೇಂದ್ರ ಮೋದಿ ಆಫ್ರಿಕನ್ ಯೂನಿಯನ್ ಅಧ್ಯಕ್ಷ ಅಜಲಿ ಅಸ್ಸೌಮಾ ಅವರನ್ನು ಅಪ್ಪಿಕೊಳ್ಳುವ ಮೂಲಕ ಒಕ್ಕೂಟಕ್ಕೆ ಸ್ವಾಗತಿಸಿದರು.
ಜಿ20 ಸೇರ್ಪಡೆಯಾಗುತ್ತಿದ್ದಂತೆ ಸಭೆ ಉದ್ದೇಶಿಸಿ ಮಾತು ಆರಂಭಿಸಿದ ನರೇಂದ್ರ ಮೋದಿ, ನಿಮ್ಮೆಲ್ಲರ ಬೆಂಬಲದೊಂದಿಗೆ ನಾನು ಆಫ್ರಿಕನ್ ಯೂನಿಯನ್ ಅನ್ನು ಜಿ20 ಗೆ ಸೇರಲು ಆಹ್ವಾನಿಸುತ್ತೇನೆ ಎಂದು ಹೇಳಿದರು.
ಬಳಿಕ ಆಫ್ರಿಕನ್ ಯೂನಿಯನ್ ಅನ್ನು ಜಿ20ಗೆ ಸೇರಲು ಆಹ್ವಾನಿಸಿದರು. ಪ್ರಧಾನಿ ಮೋದಿ ಪ್ರಸ್ತಾಪವನ್ನು ಎಲ್ಲಾ ಸದಸ್ಯ ರಾಷ್ಟ್ರಗಳು ಒಪ್ಪಿಕೊಂಡ ಬಳಿಕ ಕೊಮೊರೊಸ್ ಒಕ್ಕೂಟ ಮತ್ತು ಆಫ್ರಿಕನ್ ಯೂನಿಯನ್ ಅಧ್ಯಕ್ಷ ಅಜಲಿ ಅಸ್ಸೌಮಾನಿ ಅವರನ್ನು ಜಿ20 ಹೈ ಟೇಬಲ್ನಲ್ಲಿ ತಮ್ಮ ಸ್ಥಾನವನ್ನು ಪಡೆದುಕೊಳ್ಳಲು ಆಹ್ವಾನಿಸಲಾಯಿತು.
ಆಫ್ರಿಕನ್ ಯೂನಿಯನ್ 55 ರಾಷ್ಟ್ರಗಳನ್ನು ಒಳಗೊಂಡಿದೆ ಜಿ20ನಲ್ಲಿ ಅದರ ಸೇರ್ಪಡೆಯೊಂದಿಗೆ, ಈ ಮೂಲಕ ಯುರೋಪಿಯನ್ ಒಕ್ಕೂಟದ ಬಳಿಕ 2ನೇ ಅತಿದೊಡ್ಡ ಯೂನಿಯನ್ ಇದಾಗಿದೆ. ಆಫ್ರಿಕನ್ ಯೂನಿಯನ್ ಪ್ರವೇಶದ ಬಳಿಕ ಜಿ20 ಅನ್ನು ಜಿ21 ಎಂದು ಮರುನಾಮಕರಣ ಮಾಡುವ ನಿರೀಕ್ಷೆಯಿದೆ.