ಬ್ರಸೆಲ್ಸ್ : ಜಿ20 ಅತಿಥಿಗಳಿಗೆ ಭಾರತದ ವಾಸ್ತವತೆಯನ್ನು ಮರೆಮಾಡುವ ಅಗತ್ಯವಿಲ್ಲ ಎಂದು ಕಾಂಗ್ರೆಸ್ ನಾಯಕ ಹಾಗೂ ಸಂಸದ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಅಲ್ಲದೇ ನಮ್ಮ ದೇಶದ ಬಡ ಜನರನ್ನು ಮರೆಮಾಚುವ ಅಗತ್ಯ ಇಲ್ಲ ಎಂದು ಅವರು ಸೋಷಿಯಲ್ ಮೀಡಿಯಾ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
ರಾಹುಲ್ ಗಾಂಧಿ ಅವರು ಭಾರತೀಯ ಸಾಗರೋತ್ತರ ಕಾಂಗ್ರೆಸ್ ಆಯೋಜಿಸಿರುವ ಯೂರೋಪ್ ಪ್ರವಾಸದಲ್ಲಿದ್ದಾರೆ. ಅಲ್ಲಿಂದಲೇ ಭಾರತದಲ್ಲಿ ನಡೆಯುತ್ತಿರುವ ಜಿ2ಂ ಶೃಂಗ ಸಭೆಯನ್ನು ಗಮನಿಸುತ್ತಿದ್ದಾರೆ. ಪ್ರಧಾನಿ ಮೋದಿ ಹಾಗೂ ಅಮೆರಿಕ ಅಧ್ಯಕ್ಷರನ್ನು ಪತ್ರಕರ್ತರು ಪ್ರಶ್ನಿಸಲು ಅವಕಾಶ ನೀಡದ ವಿಚಾರವಾಗಿ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.
ಅಲ್ಲದೇ ಜಿ20 ಸಭೆಗೂ ಮುನ್ನ ದೆಹಲಿಯ ಬೀದಿಗಳಲ್ಲಿ ನಾಯಿಗಳನ್ನು ಸೆರೆ ಹಿಡಿಯಲಾಗಿತ್ತು, ಅಲ್ಲದೇ ಸ್ಲಂಗಳಿಗೆ ಪರದೆಯ ಮೂಲಕ ಮರೆ ಮಾಡಲಾಗಿತ್ತು. ಈ ಬಗ್ಗೆ ಕಾಂಗ್ರೆಸ್ ವೀಡಿಯೋ ಒಂದನ್ನು ಹಂಚಿಕೊಂಡಿತ್ತು. ಈ ವಿಚಾರವಾಗಿ ನಮ್ಮ ನೆಲದ ಜನರು ಹಾಗೂ ಪ್ರಾಣಿಗಳನ್ನು ಮುಚ್ಚಿಡುವ ಅಗತ್ಯವಿಲ್ಲ ಎಂದು ಬರೆದುಕೊಂಡಿದ್ದಾರೆ.