ಕಾನೂನು ಉಲ್ಲಂಘನೆ ಮಾಡಿದ್ರೆ ಕ್ರಮ : ಆರಗ ಎಚ್ಚರಿಕೆ

ಸೋಮವಾರ, 5 ಡಿಸೆಂಬರ್ 2022 (13:03 IST)
ಬೆಂಗಳೂರು : ಮಹಾರಾಷ್ಟ್ರದ ಸಚಿವರು ಕಾನೂನು ಉಲ್ಲಂಘನೆ ಮಾಡಿದರೆ ಅವರ ಮೇಲೂ ಕ್ರಮ ತೆಗೆದುಕೊಳ್ತೀವಿ ಅಂತ ಗೃಹ ಸಚಿವ ಆರಗ ಜ್ಞಾನೇಂದ್ರ ಮಹಾರಾಷ್ಟ್ರದ ಸಚಿವರಿಗೆ ಎಚ್ಚರಿಕೆ ನೀಡಿದ್ದಾರೆ.

ಬೆಳಗಾವಿಗೆ ಆಗಮಿಸುತ್ತಿರೋ ಮಹಾರಾಷ್ಟ್ರದ ಸಚಿವರ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಯಾರೇ ಕಾನೂನು ಉಲ್ಲಂಘನೆ ಮಾಡಿದರೂ ಅವರ ಮೇಲೆ ಕ್ರಮ ತಗೋತೀವಿ. ಅವರು ಸಚಿವರು ಆದರೂ ಬಿಡೋದಿಲ್ಲ ಅಂತ ಎಚ್ಚರಿಕೆ ನೀಡಿದ್ದಾರೆ.

ಈಗಾಗಲೇ ಸಿಎಂ ಅವರು ಇದರ ಬಗ್ಗೆ ಸಂಪೂರ್ಣವಾಗಿ ಹೇಳಿದ್ದಾರೆ. ಈಗಾಗಲೇ ನಮ್ಮ ರಾಜ್ಯ-ಮಹಾರಾಷ್ಟ್ರದ ಡಿಜಿಗಳು, ಎಡಿಜಿಪಿಗಳ ಮೀಟಿಂಗ್ ನಡೆದಿದೆ. ಭಾವನಾತ್ಮಕವಾಗಿ ಏನಾದರೂ ಕೆಣಕಲು ಬಂದರೆ ನಾವು ಬಿಡೊಲ್ಲ. ಈ ಬಗ್ಗೆ ಪೊಲೀಸರು ಎರಡು ಭಾಗದ ಜನರಿಗೆ ಎಚ್ಚರಿಕೆ ನೀಡಿದ್ದಾರೆ ಅಂತ ತಿಳಿಸಿದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ