ಗೆಳತಿಯನ್ನು ಮೆಚ್ಚಿಸಲು ಕಾರ್ ಕದ್ದ ಪ್ರಿಯಕರ!

ಶುಕ್ರವಾರ, 25 ನವೆಂಬರ್ 2022 (12:43 IST)
ಮುಂಬೈ : ಗೆಳತಿಯನ್ನು ಮೆಚ್ಚಿಸಲು ಯುವಕನೊಬ್ಬ ಐಷಾರಾಮಿ ಕಾರನ್ನು ಕದ್ದು ಪೊಲೀಸರಿಗೆ ಸೆರೆ ಸಿಕ್ಕ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.

ಆರೋಪಿಯನ್ನು ವಿಮಾನನಗರ ನಿವಾಸಿ ಇಶಾಂತ್ ಶರ್ಮಾ (25) ಎಂದು ಗುರುತಿಸಲಾಗಿದೆ. ನದೀಮ್ ಶೇಖ್ ಎಂಬಾತ ಐಷಾರಾಮಿ ಕಾರುಗಳ ಮಾರಾಟ ಮಾಡುತ್ತಿದ್ದ.

ಈ ಹಿನ್ನೆಲೆಯಲ್ಲಿ ನದೀಮ್ ಶೇಖ್ ಅತ್ಯಾಧುನಿಕ ಕಾರುಗಳನ್ನು ಮಾರಾಟ ಮಾಡುವ ಜಾಹಿರಾತನ್ನು ಪೋಸ್ಟ್ ಮಾಡಿದ್ದ. ಈ ಜಾಹಿರಾತನ್ನು ನೋಡಿದ್ದ ಇಶಾಂತ್, ನದೀಮ್ ಶೇಖ್ನನ್ನು ಸಂಪರ್ಕಿಸಿ ಕಾರನ್ನು ಖರೀದಿಸುವುದಾಗಿ ತಿಳಿಸಿದ್ದಾನೆ.

ಅಷ್ಟೇ ಅಲ್ಲದೇ ನದೀಮ್ ಶೇಖ್ನ ಶೋರೂಮ್ಗೆ ಭೇಟಿ ನೀಡಿದ್ದ ಇಶಾಂತ್ 2.80 ಲಕ್ಷ ರೂ.ಗೆ ಕಾರನ್ನು ಖರೀದಿಸುವುದಾಗಿ ಒಪ್ಪಂದ ಮಾಡಿಕೊಂಡಿದ್ದಾನೆ. ಅಷ್ಟೇ ಅಲ್ಲದೇ ತನ್ನ ತಾಯಿಯ ಜನ್ಮದಿನವಿದೆ. ಇದರಿಂದಾಗಿ ಕಾರನ್ನು ಉಡುಗೊರೆಯಾಗಿ ನೀಡುತ್ತೇನೆ ಎಂದು ತಿಳಿಸಿದ್ದಾನೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ