ಸತತ 2ನೇ ದಿನವೂ ಪಾತಾಳದತ್ತ ಅದಾನಿ ಷೇರುಗಳ ಮೌಲ್ಯ: ವರ್ಷದಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿತ

Sampriya

ಶುಕ್ರವಾರ, 22 ನವೆಂಬರ್ 2024 (14:39 IST)
ಮುಂಬೈ: ಭಾರತದ ಖ್ಯಾತ ಉದ್ಯಮಿ ಗೌತಮ್ ಅದಾನಿ ಅವರ ವಿರುದ್ಧ ಅಮೆರಿಕಾದಲ್ಲಿ ಭ್ರಷ್ಟಾಚಾರದ ಆರೋಪ ಹೊರಿಸಿ ಬಂಧನ ವಾರಂಟ್‌ ಹೊರಡಿಸಿದ ಬೆನ್ನಲ್ಲೇ ಅದಾನಿ ಸಮೂಹದ ಷೇರುಗಳ ಮೌಲ್ಯ ಸತತ ಎರಡನೇ ದಿನವೂ ಕುಸಿತ ಕಂಡಿವೆ.

ಅದಾನಿ ಸಮೂಹದ 10 ಕಂಪನಿಗಳ ಪೈಕಿ ಎಂಟು ಷೇರುಗಳ ಮೌಲ್ಯ ಇಳಿಕೆ ಕಂಡಿವೆ. ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ ಅದಾನಿ ಗ್ರೀನ್ ಎನರ್ಜಿ ಶೇ 10.95, ಅದಾನಿ ಎನರ್ಜಿ ಸಲ್ಯೂಷನ್ಸ್ ಶೇ 8.57 ರಷ್ಟು ಕುಸಿತ ಕಂಡಿವೆ. ಆ ಮೂಲಕ 52 ವಾರಗಳಲ್ಲೇ ಷೇರುಗಳ ಮೌಲ್ಯ ಕನಿಷ್ಠ ಮಟ್ಟಕ್ಕೆ ತಲುಪಿವೆ.

ಅದಾನಿ ಎಂಟರ್‌ಪ್ರೈಸಸ್ ಶೇ 6.98, ಅದಾನಿ ಪವರ್ 6.38, ಅದಾನಿ ಟೋಟಲ್ ಗ್ಯಾಸ್ ಶೇ 6.11, ಅದಾನಿ ಪೋರ್ಟ್ಸ್ ಶೇ 5.31, ಅದಾನಿ ವಿಲ್ಮರ್ ಶೇ 5.17 ಮತ್ತು ಎನ್‌ಡಿಟಿವಿ ಶೇ 3.41ರಷ್ಟು ಕುಸಿತ ಕಂಡಿವೆ. ಮತ್ತೊಂದೆಡೆ ಎಸಿಸಿ ಮತ್ತು ಅಂಬುಜಾ ಸಿಮೆಂಟ್ಸ್ ಸ್ವಲ್ಪ ಚೇತರಿಕೆ ಕಂಡಿದ್ದು, ಶೇ 2ರಷ್ಟು ಏರಿಕೆ ಕಂಡಿವೆ.

ಗುರುವಾರ ಷೇರುಪೇಟೆ ವಹಿವಾಟಿನಲ್ಲಿ ಅದಾನಿ ಸಮೂಹದ ಕಂಪನಿಗಳ ಷೇರಿನ ಮೌಲ್ಯ ಶೇ 20ರಷ್ಟು ಕುಸಿತ ಕಂಡಿತ್ತು. ಒಂದೇ ದಿನ ಮಾರುಕಟ್ಟೆ ಬಂಡವಾಳ ಮೌಲ್ಯ  ₹2.19 ಲಕ್ಷ ಕೋಟಿ ಕರಗಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ