20 ನೇ ಗಿನ್ನೆಸ್ ವಿಶ್ವ ದಾಖಲೆ ದಿನದಂದು ವಿಶ್ವದ ಅತಿ ಎತ್ತರದ- ಕುಬ್ಜ ಮಹಿಳೆಯರ ಭೇಟಿ

Sampriya

ಗುರುವಾರ, 21 ನವೆಂಬರ್ 2024 (16:42 IST)
Photo Courtesy X
20 ನೇ ಗಿನ್ನೆಸ್ ವಿಶ್ವ ದಾಖಲೆಗಳ ದಿನವಾದ ಇಂದು ವಿಶ್ವದ ಅತಿ ಎತ್ತರದ ಮತ್ತು ಕುಬ್ಜ ಮಹಿಳೆಯರ ಭೇಟಿಯ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ವಿಶ್ವದ ಅತೀ ಎತ್ತರ 27 ವರ್ಷದ ಟರ್ಕಿಶ್ ವೆಬ್ ಡೆವಲಪರ್ ರುಮೆಸಾ ಗೆಲ್ಗಿ ಮತ್ತು ವಿಶ್ವದ ಅತೀ ಕುಬ್ಜ 30 ವರ್ಷದ ಭಾರತೀಯ ನಟಿ ಜ್ಯೋತಿ ಅಮ್ಗೆ ಲಂಡನ್‌ನ ದಿ ಸವೊಯ್ ಹೋಟೆಲ್‌ನಲ್ಲಿ ಭೇಟಿಯಾದರು. ತಮ್ಮ ಭೇಟಿಯ ಸಮಯದಲ್ಲಿ ಅನೇಕ ವಿಚಾರಗಳನ್ನು ಇವರಿಬ್ಬರು ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಗೆಲ್ಗಿ 215.16cm (7ft 1in) ನಲ್ಲಿ ವಿಶ್ವದ ಅತಿ ಎತ್ತರದ ಮಹಿಳೆ ಎಂಬ ಗಿನ್ನೆಸ್ ವಿಶ್ವ ದಾಖಲೆಯನ್ನು (GWR) ಹೊಂದಿದ್ದಾರೆ, ಹಾಗೂ ಜ್ಯೋತಿ ಆಮ್ಗೆ 62.8cm (2ft 1in) ನಲ್ಲಿ ಅತ್ಯಂತ ಕುಜ್ಬ ಮಹಿಳೆ ಎಂದು ವಿಶ್ವ ದಾಖಲೆಯನ್ನು ಮಾಡಿದ್ದಾರೆ.

"ಮೊದಲ ಬಾರಿಗೆ ಜ್ಯೋತಿಯನ್ನು ಭೇಟಿಯಾಗುವುದು ತುಂಬಾ ಅದ್ಭುತವಾಗಿದೆ" ಎಂದು Ms ಗೆಲ್ಗಿ ಹೇಳಿದರು.

"ನಮ್ಮ ಎತ್ತರದ ವ್ಯತ್ಯಾಸದಿಂದಾಗಿ ಕೆಲವೊಮ್ಮೆ ಕಣ್ಣಿನ ಸಂಪರ್ಕವನ್ನು ಮಾಡುವುದು ನಮಗೆ ಕಷ್ಟಕರವಾಗಿತ್ತು, ಆದರೆ ಅದು ಅದ್ಭುತವಾಗಿದೆ ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ