ಇನ್ಮುಂದೆ ಏರ್‌ಬ್ಯಾಗ್ ಕಡ್ಡಾಯ : ನಿತಿನ್ ಗಡ್ಕರಿ

ಗುರುವಾರ, 8 ಸೆಪ್ಟಂಬರ್ 2022 (08:34 IST)
ನವದೆಹಲಿ : ರಸ್ತೆಗಳಲ್ಲಿನ ಮಾರಣಾಂತಿಕ ಅಪಘಾತಗಳನ್ನು ತಪ್ಪಿಸಲು ಸರ್ಕಾರ ತನ್ನ ಕೈಯಿಂದಾದಷ್ಟು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ.

ನಿನ್ನೆಯಷ್ಟೇ ಕಾರಿನಲ್ಲಿ ಹಿಂಬದಿ ಪ್ರಯಾಣಿಕರಿಗೆ ಸೀಟ್ಬೆಲ್ಟ್ಗಳನ್ನು ಕಡ್ಡಾಯಗೊಳಿಸಿದ್ದು, ಇದೀಗ ಸರ್ಕಾರ 8 ಆಸನಗಳ ವಾಹನಗಳಲ್ಲಿ 6 ಏರ್ಬ್ಯಾಗ್ಗಳನ್ನು ಕಡ್ಡಾಯಗೊಳಿಸಲು ಯೋಜಿಸಿದೆ.

ಅಕ್ಟೋಬರ್ನಿಂದ ಕಾರು ತಯಾರಕರು 8 ಆಸನಗಳ ವಾಹನಗಳಲ್ಲಿ ಕನಿಷ್ಠ 6 ಏರ್ಬ್ಯಾಗ್ಗಳನ್ನು ಒದಗಿಸುವುದನ್ನು ಕಡ್ಡಾಯಗೊಳಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ರಸ್ತೆ, ಸಾರಿಗೆ ಮತ್ತು ಹೆದ್ದಾರಿಗಳ ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.

ಈ ಬಗ್ಗೆ ಜನವರಿ 14 ರಂದು ಕರಡು ಅಧಿಸೂಚನೆಯನ್ನು ಹೊರಡಿಸಲಾಗಿದೆ. ಇದರ ಪ್ರಕಾರ ಈ ವರ್ಷದ ಅಕ್ಟೋಬರ್ 1 ರ ಬಳಿಕ ತಯಾರಿಸಲಾಗುವ ಎಂ1 ವರ್ಗದ ವಾಹನಗಳಿಗೆ 2 ಬದಿಯ ಏರ್ಬ್ಯಾಗ್ಗಳನ್ನು ಅಳವಡಿಸಬೇಕು. ಮುಂಭಾಗದ ಔಟ್ಬೋರ್ಡ್ ಆಸನದಲ್ಲಿ ಕುಳಿತುಕೊಳ್ಳುವವರಿಗಾಗಿ ಸುತ್ತಲೂ ಏರ್ಬ್ಯಾಗ್ಗಳನ್ನು ಅಳವಡಿಸಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ