ವಾಣಿಜ್ಯ ಟ್ರಕ್ ಚಾಲಕರಿಗೂ ಚಾಲನಾ ಅವಧಿ ನಿಗದಿಯಾಗಲಿ: ಗಡ್ಕರಿ

ಬುಧವಾರ, 22 ಸೆಪ್ಟಂಬರ್ 2021 (09:52 IST)
ನವದೆಹಲಿ : ಪೈಲಟ್ಗಳ ಮಾದರಿಯಲ್ಲೇ ಇನ್ನು ಮುಂದೆ ವಾಣಿಜ್ಯ ಟ್ರಕ್ ಚಾಲಕರಿಗೂ “ಚಾಲನಾ ಅವಧಿ’ಯನ್ನು ನಿಗದಪಡಿಸಬೇಕು. ಜತೆಗೆ, ವಾಣಿಜ್ಯ ವಾಹನಗಳ ಒಳಗೆ “ನಿದ್ರೆ ಪತ್ತೆ ಸೆನ್ಸರ್’ಗಳನ್ನು ಅಳವಡಿಸಬೇಕು. ಆಗ ರಸ್ತೆ ಅಪಘಾತಗಳನ್ನು ತಗ್ಗಿಸಲು ಸಾಧ್ಯ ಎಂದು ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಮಂಗಳವಾರ ಸರಣಿ ಟ್ವೀಟ್ಗಳ ಮೂಲಕ ಅವರು ಈ ರೀತಿಯ ಸಲಹೆಗಳನ್ನು ನೀಡಿದ್ದಾರೆ. ಬಹುತೇಕ ಅಪಘಾತಗಳಿಗೆ ಚಾಲಕನ ಬಳಲಿಕೆಯೇ ಕಾರಣ. ಅದನ್ನು ತಪ್ಪಿಸಬೇಕೆಂದರೆ, ವಾಣಿಜ್ಯ ಟ್ರಕ್ಗಳ ಚಾಲಕರಿಗೆ ಇಂತಿಷ್ಟೇ ಚಾಲನಾ ಅವಧಿ ಎಂದು ನಿಗದಿಪಡಿಸಬೇಕು.
ಅಲ್ಲದೇ, ಅವರು ವಾಹನ ಚಾಲನೆ ಮಾಡುತ್ತಾ ನಿದ್ರೆಗೆ ಜಾರದಂತೆ ತಡೆಯಲು, ಸೆನ್ಸೆರ್ ಅಳವಡಿಸಬೇಕು. ನಿದ್ದೆ ಆವರಿಸುತ್ತಿದ್ದಂತೆ ಆ ಸೆನ್ಸರ್ ಅವರನ್ನು ಎಚ್ಚರಿಸುವಂತಿರಬೇಕು. ಐರೋಪ್ಯ ಮಾದರಿಯಲ್ಲಿ ಇಂಥ “ಸ್ಲೀಪ್ ಡಿಟೆಕ್ಷನ್ ಸೆನ್ಸರ್’ಗಳನ್ನು ಅಳವಡಿಸುವ ನಿಯಮದ ಕುರಿತು ಚಿಂತನೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದೂ ಗಡ್ಕರಿ ಹೇಳಿದ್ದಾರೆ. ಇದೇ ವೇಳೆ, ಇತ್ತೀಚಿನ ದಿನಗಳಲ್ಲಿ ದೇಶದ ಹೆದ್ದಾರಿ ಯೋಜನೆಗಳಲ್ಲಿ ಚೀನಾದ ಕಂಪನಿಗಳು ಹೂಡಿಕೆ ಮಾಡಿಲ್ಲ ಎಂದೂ ಗಡ್ಕರಿ ಸ್ಪಷ್ಟಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ