ಶಿವಸೇನೆ ಇಲ್ಲಾಂದ್ರೆ ಏಕಾಂಗಿಯಾಗಿ ಹೋರಾಡಲು ಸಿದ್ಧರಾಗಿ: ಅಮಿತ್ ಶಾ ಕರೆ
ಶಿವಸೇನೆಯನ್ನು ನಂಬುತ್ತಾ ಕೂತರೆ ಇನ್ನು ಮಹಾರಾಷ್ಟ್ರದಲ್ಲಿ ಪ್ರಚಾರ ಕಷ್ಟ ಎಂದು ಬಿಜೆಪಿಗೆ ಈಗ ಅರಿವಾಗಿದೆ. ಅವಿಶ್ವಾಸ ಮತ ಸಂದರ್ಭದಲ್ಲಿಯೂ ಶಿವಸೇನೆ ಕೊನೆ ಕ್ಷಣದಲ್ಲಿ ಕೈ ಕೊಟ್ಟಿತ್ತು. ಈ ಹಿನ್ನಲೆಯಲ್ಲಿ ಅಮಿತ್ ಶಾ ಬಿಜೆಪಿ ಏಕಾಂಗಿಯಾಗಿ ಚುನಾವಣೆ ಎದುರಿಸಲು ಕರೆ ಕೊಟ್ಟಿದ್ದಾರೆ.
ಶಿವಸೇನೆ ಬಂದರೆ ಸ್ವಾಗತ. ಇಲ್ಲವಾದರೆ ಏಕಾಂಗಿಯಾಗಿ ಆದರೂ ಸರಿಯೇ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಕೆಲಸ ಮಾಡುವಂತೆ ಅಮಿತ್ ಶಾ ಪಕ್ಷದ ನಾಯಕರಿಗೆ ಕಾರ್ಯಕರ್ತರಿಗೆ ಸೂಚಿಸಿದ್ದಾರೆ.