ಪೋಷಕರ ಜೊತೆ ಮಲಗಿದ್ದ ಅಪ್ರಾಪ್ತ ಬಾಲಕಿಯನ್ನು ಎಳೆದೊಯ್ದು ಅತ್ಯಾಚಾರ
ಸೋಮವಾರ, 2 ಡಿಸೆಂಬರ್ 2019 (06:12 IST)
ಗಾಂಧಿನಗರ : ರಸ್ತೆಯ ಬದಿಯಲ್ಲಿ ಪೋಷಕರ ಜೊತೆ ಮಲಗಿದ್ದ 8 ವರ್ಷದ ಅಪ್ರಾಪ್ತ ಬಾಲಕಿಯನ್ನು ಎಳೆದೊಯ್ದು ಕಾಮುಕನೊಬ್ಬ ಅತ್ಯಾಚಾರ ಎಸಗಿದ ಘಟನೆ ಗುಜರಾತ್ ನಲ್ಲಿ ನಡೆದಿದೆ.
ಗುಜರಾತ್ ನ ರಾಜಕೋಟ್ ಬಳಿಯ ನಗರಸಭೆಯ ಗಾರ್ಡನ್ ನಲ್ಲಿ ಬಾಲಕಿಯು ತನ್ನ ಪೋಷಕರ ಜೊತೆ ಮಲಗಿದ್ದಾಗ ರಾತ್ರಿ 11.30ಕ್ಕೆ ಮಧ್ಯಮ ವಯಸ್ಸಿನ ವ್ಯಕ್ತಿಯೊಬ್ಬ ಬಾಲಕಿಯನ್ನು ಬ್ಲಾಂಕೆಟ್ ಸಮೇತ ಎತ್ತುಕೊಂಡು ಸೇತುವೆ ಕೆಳಗಿನ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ಬಳಿಕ ಬಾಲಕಿ ಓಡಿ ಬಂದು ತನ್ನ ಪೋಷಕರಿಗೆ ನಡೆದ ವಿಚಾರ ತಿಳಿಸಿದ್ದಾಳೆ.
ಪೋಷಕರು ಕಾಮುಕನ ವಿರುದ್ಧ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ್ದಾರೆ. ಆ ವೇಳೆ ಸಿಸಿಟಿವಿಯೊಂದರಲ್ಲಿ ಈ ದೃಶ್ಯ ಸೆರೆಯಾದ ಹಿನ್ನಲೆಯಲ್ಲಿ ಆರೋಪಿಯನ್ನು ಹುಡುಕಿಕೊಟ್ಟವರಿಗೆ 50 ಸಾವಿರ ಬಹುಮಾನ ನೀಡುವುದಾಗಿ ಪೊಲೀಸರು ಘೋಷಿಸಿದ್ದಾರೆ ಎನ್ನಲಾಗಿದೆ.