ಕಣ್ಣಿಗೊತ್ತಿಕೊಂಡು ಸೇವಿಸುವ ತಿರುಪತಿ ಲಡ್ಡಿಗೆ ಪ್ರಾಣಿಗಳ ಕೊಬ್ಬು ಬಳಕೆ

Krishnaveni K

ಗುರುವಾರ, 19 ಸೆಪ್ಟಂಬರ್ 2024 (10:39 IST)
Photo Credit: Facebook
ತಿರುಮಲ: ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋದಾಗ ಮರೆಯದೇ ಎಲ್ಲರೂ ಲಡ್ಡು ಪ್ರಸಾದ ತರುತ್ತಾರೆ. ಆದರೆ ಪ್ರಸಾದಕ್ಕೆ ಈ ಹಿಂದೆ ಪ್ರಾಣಿಗಳ ಕೊಬ್ಬು ಬಳಕೆ ಮಾಡಲಾಗುತ್ತಿತ್ತು ಎಂಬ ಗಂಭೀರ ಆರೋಪವನ್ನು ಸಿಎಂ ಚಂದ್ರಬಾಬು ನಾಯ್ಡು ಮಾಡಿದ್ದಾರೆ.

ಈ ಹಿಂದೆ ಜಗನ್ ರೆಡ್ಡಿ ಸರ್ಕಾರವಿದ್ದಾಗ ತಿಮ್ಮಪ್ಪನ ಪ್ರಸಾದವಾಗಿ ಕೊಡುತ್ತಿದ್ದ ಲಡ್ಡಿಗೆ ಪ್ರಾಣಿಗಳ ಕೊಬ್ಬು ಬಳಸಲಾಗುತ್ತಿತ್ತು. ಆದರೆ ಇನ್ನು ಮುಂದೆ ಪವಿತ್ರ ದೇವಾಲಯದಲ್ಲಿ ಇಂತಹ ಅಕ್ರಮಗಳೆಲ್ಲಾ ನಡೆಯಲ್ಲ ಎಂದು ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಹೇಳಿದ್ದಾರೆ.

ಜಗನ್ ಸರ್ಕಾರವಿದ್ದಾಗ ತಿರುಪತಿ ದೇವಾಲಯ ಬೋರ್ಡ್ ಗೆ ಹಿಂದೂಯೇತರರನ್ನು ನೇಮಿಸಲಾಗುತ್ತಿತ್ತು. ಆದರೆ ಇನ್ನು ಮುಂದೆ ಈ ದೇವಾಲಯ ಕೇವಲ ಹಿಂದೂಗಳಿಗೆ ಸೀಮಿತ. ಹಿಂದೂಯೇತರ ಧರ್ಮದವರು ಆಡಳಿತ ಮಂಡಳಿಯಲ್ಲಿ ಇರಲ್ಲ ಎಂದು ಚಂದ್ರಬಾಬು ನಾಯ್ಡು ಹೇಳಿದ್ದರು.

ಇದರ ಬೆನ್ನಲ್ಲೇ ಹಿಂದಿನ ಜಗನ್ ಸರ್ಕಾರವಿದ್ದಾಗ ಲಡ್ಡು ಪ್ರಸಾದದಲ್ಲಿ ನಡೆಯುತ್ತಿದ್ದ ಅಕ್ರಮದ ಬಗ್ಗೆ ಆರೋಪ ಮಾಡಿದ್ದಾರೆ. ಇನ್ನು ಮುಂದೆ ತಿರುಪತಿ ಲಡ್ಡಿಗೆ ಕೇವಲ ಶುದ್ಧ ಹಸುವಿನ ತುಪ್ಪ ಮಾತ್ರ ಬಳಕೆ ಮಾಡಲಾಗುತ್ತದೆ ಎಂದಿದ್ದಾರೆ. ಆದರೆ ಚಂದ್ರಬಾಬು ನಾಯ್ಡು ಆರೋಪವನ್ನು ವೈಎಸ್ ಆರ್ ಕಾಂಗ್ರೆಸ್ ಪಕ್ಷ ನಿರಾಕರಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ