ರಾಹುಲ್ ಗಾಂಧಿಗೆ ಅದ್ಯಾವಾಗ ಬುದ್ದಿ ಬರುತ್ತೋ..!: ಸಚಿವ ಅರುಣ್ ಜೇಟ್ಲಿ

ಗುರುವಾರ, 7 ಜೂನ್ 2018 (09:54 IST)
ನವದೆಹಲಿ: ಪ್ರತೀ ಬಾರಿ ರಾಹುಲ್ ಗಾಂಧಿ ಸಂಸತ್ತಿನ ಹೊರಗೆ ಮತ್ತು ಒಳಗೆ ಮಾತನಾಡುವುದನ್ನು ಕೇಳಿದಾಗಲೆಲ್ಲಾ ನನಗನಿಸುವುದು ಈ ಮನುಷ್ಯನಿಗೆ ಅದೇನು ತಿಳುವಳಿಕೆ ಇದೆ? ಅದ್ಯಾವಾಗ ಬುದ್ಧಿ ಬರುತ್ತದೋ ಎಂದು.. ಹೀಗಂತ ವಿದೇಶಾಂಗಗ ಸಚಿವ ಅರುಣ್ ಜೇಟ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ತಿರುಗೇಟು ಕೊಟ್ಟಿದ್ದಾರೆ.

ಮಧ್ಯಪ್ರದೇಶದಲ್ಲಿ ನಡೆದ ರ್ಯಾಲಿಯಲ್ಲಿ ರಾಹುಲ್ ಗಾಂಧಿ ಕೇಂದ್ರ ಸರ್ಕಾರ ರೈತರ ಸಾಲ ಮನ್ನಾ ಮಾಡದೇ ಉದ್ದಿಮೆದಾರರ ಸಾಲಮನ್ನಾ ಮಾಡುವುದರಲ್ಲಿ ನಿರತವಾಗಿದೆ ಎಂದು ಆರೋಪಿಸಿದ್ದರು. ಇದಕ್ಕೆ ಜೇಟ್ಲಿ ತಿರುಗೇಟು ಕೊಟ್ಟಿದ್ದಾರೆ.

‘ರಾಹುಲ್ ಗಾಂಧಿ ಹೇಳುತ್ತಿರುವುದೆಲ್ಲವೂ ಸುಳ್ಳು. ಇದು ನಮ್ಮ ಕಾಲದಲ್ಲಲ್ಲ. ಯುಪಿಎ ಎರಡನೇ ಅವಧಿಯಲ್ಲಿ ಇಂತಹ ಎಡವಟ್ಟು ನಡೆಯುತ್ತಿತ್ತು. ರೈತರಿಗೆ ವಂಚಿಸಿ ಉದ್ಯಮಿಗಳ ಬೇಕಾಬಿಟ್ಟೆ ಹಣ ಒದಗಿಸಲಾಗುತ್ತಿತ್ತು. ನಾವು ಅದನ್ನೆಲ್ಲಾ ಹಂತ ಹಂತವಾಗಿ ನಿಲ್ಲಿಸಿದ್ದೇವೆ. ಇದೀಗ ಅದರ ವಸೂಲಾತಿ ಕೆಲಸ ಮಾಡುತ್ತಿದ್ದೇವೆ’ ಎಂದು ಜೇಟ್ಲಿ ಹೇಳಿದ್ದಾರೆ.

ಇನ್ನು ಇದೇ ರ್ಯಾಲಿಯಲ್ಲಿ ಚೀನಾದಲ್ಲಿ ತಯಾರಾಗುತ್ತಿರುವ ಮೊಬೈಲ್ ಗಳನ್ನು ನಾವು ಅಧಿಕಾರಕ್ಕೆ ಬಂದರೆ ಭಾರತದಲ್ಲೇ ತಯಾರಿಸುತ್ತೇವೆ ಎಂದಿದ್ದ ರಾಹುಲ್ ಮಾತನ್ನು ಲೇವಡಿ ಮಾಡಿರುವ ಜೇಟ್ಲಿ ಇದು ಅಜ್ಞಾನದ ಪರಮಾವಧಿ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ