ನೋಟು ನಿಷೇಧಕ್ಕೆ ಮಹಾತ್ಮಾ ಗಾಂಧಿ ಮಾತು ನೆನಪಿಸಿದ ಅರುಣ್ ಜೇಟ್ಲಿ

ಬುಧವಾರ, 1 ಫೆಬ್ರವರಿ 2017 (11:31 IST)
ನವದೆಹಲಿ: 2017 ನೇ ಸಾಲಿನ ಬಜೆಟ್ ಮಂಡಿಸುತ್ತಿರುವ ಹಣಕಾಸು ಸಚಿವ ಅರುಣ್ ಜೇಟ್ಲಿ ನೋಟು ನಿಷೇಧದ ಬಗ್ಗೆ ತಗಾದೆ ತೆಗೆಯುತ್ತಿರುವ ಪ್ರತಿಪಕ್ಷಗಳಿಗೆ ಮಹಾತ್ಮಾ ಗಾಂಧೀಜಿ ಸಾಲನ್ನು ನೆನಪಿಸಿ ತಿರುಗೇಟು ನೀಡಿದ್ದಾರೆ.

 
ರಾಷ್ಟ್ರಪಿತ ಗಾಂಧೀಜಿ ಯಾವುದೇ ಬದಲಾವಣೆಗಳು ಸರಿಯಾದ ಉದ್ದೇಶಕ್ಕಾಗಿ ಪ್ರಾರಂಭಿಸಿದರೆ ಅದರಲ್ಲಿ ತಪ್ಪೇನಿಲ್ಲ ಎಂದಿದ್ದರು. ಅದೇ ಉದ್ದೇಶದೊಂದಿಗೆ ನಾವು ನೋಟು ನಿಷೇಧವನ್ನೂ ಜಾರಿಗೆ ತಂದಿದ್ದೇವೆ ಎಂದು ಅರುಣ್ ಜೇಟ್ಲಿ ಹೇಳಿದರು.

ಇದೇ ಮುಂದಿನ ವರ್ಷದ ವೇಳೆಗೆ ನೋಟು ನಿಷೇಧದಿಂದ ಜನರಿಗಾಗುತ್ತಿರುವ ತೊಂದರೆಗಳು ಕಡಿಮೆಯಾಗಲಿವೆ. ನೋಟು ಅಮಾನ್ಯದಿಂದ ಸಾಲ ಕಡಿಮೆಯಾಗಿದೆ, ಆದಾಯ ಹೆಚ್ಚಾಗಿದೆ ಎಂದು ಜೇಟ್ಲಿ ಬಜೆಟ್ ನಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ