ಅಮಿತ್ ಶಾ ಗೂಂಡಾ ಎಂದು ಅಭಿಯಾನ ಶುರು ಮಾಡಿದ ಅರವಿಂದ್ ಕೇಜ್ರಿವಾಲ್

Krishnaveni K

ಭಾನುವಾರ, 2 ಫೆಬ್ರವರಿ 2025 (14:48 IST)
ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆ ಕಾವೇರುತ್ತಿದ್ದು, ಮೊನ್ನೆಯಷ್ಟೇ ಬಿಜೆಪಿ ವಿರುದ್ಧ ಯಮುನಾ ನದಿಗೆ ವಿಷ ಬೆರೆಸಿದ ಆರೋಪ ಮಾಡಿದ್ದ ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ಈಗ ಅಮಿತ್ ಶಾ ಗೂಂಡಾ ಎಂದು ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನ ಶುರು ಮಾಡಿದ್ದಾರೆ.

ಯಮುನಾ ನದಿಗೆ ವಿಷ ಬೆರೆಸಿದ ಆರೋಪ ಮಾಡಿದ್ದ ಕೇಜ್ರಿವಾಲ್ ಗೆ ಚುನಾವಣಾ ಆಯೋಗ ತರಾಟೆಗೆ ತೆಗೆದುಕೊಂಡಿತ್ತು. ಸೂಕ್ತ ಸಾಕ್ಷ್ಯವಿಲ್ಲದೇ ಆರೋಪ ಮಾಡಬಾರದು ಎಂದಿತ್ತು. ಕೇಜ್ರಿವಾಲ್ ನೀಡಿದ್ದ ಸಾಕ್ಷ್ಯಗಳು ತೃಪ್ತಿಕರವಾಗಿಲ್ಲ ಎಂದಿತ್ತು.

ಇದೀಗ ಅಮಿತ್ ಶಾ ವಿರುದ್ಧ ಕೇಜ್ರಿ ಸಮರ ಸಾರಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಸಂದೇಶ ನೀಡಿರುವ ಕೇಜ್ರಿವಾಲ್, ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರ ಗೂಂಡಾ ವರ್ತನೆಯ ವಿಡಿಯೋ ನಿಮ್ಮ ಗಮನಕ್ಕೆ ಬಂದಲ್ಲಿ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಎಂದು ಅಮಿತ್ ಶಾ ಕೀ ಗೂಂಡಾಗಿರಿ ಎಂದು ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡುವಂತೆ ಕರೆ ನೀಡಿದ್ದಾರೆ.

ದೆಹಲಿಯಲ್ಲಿ ಬಿಜೆಪಿಗೆ ಸೋಲುವ ಭಯ ಕಾಡಿದೆ. ಅದಕ್ಕೆ ಅಮಿತ್ ಶಾ ಮತ್ತು ಬಿಜೆಪಿ ನಾಯಕರು ಗೂಂಡಾಗಿರಿ ಶುರು ಮಾಡಿದ್ದಾರೆ. ಆದರೆ ದೆಹಲಿಯಲ್ಲಿ ಎಎಪಿ ಮತ್ತೊಂದು ಅಭೂತಪೂರ್ವ ಗೆಲುವು ದಾಖಲಿಸುವುದನ್ನು ತಡೆಯಲಾಗದು ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ