ಕೋಲ್ಕತ್ತಾ ವೈದ್ಯೆ ಡೈರಿಯಲ್ಲಿ ಕೊನೆಯದಾಗಿ ಹೀಗೆ ಬರೆದಿದ್ದಳು

Krishnaveni K

ಗುರುವಾರ, 15 ಆಗಸ್ಟ್ 2024 (13:59 IST)
ಕೋಲ್ಕೊತ್ತಾ: ಆರ್ ಜಿ ಕರ್ ಆಸ್ಪತ್ರೆಯಲ್ಲಿ ರೇಪ್ ಮತ್ತು ಹತ್ಯೆಗೊಳಗಾದ ಟ್ರೈನೀ ವೈದ್ಯೆ ತನ್ನ ಡೈರಿಯಲ್ಲಿ ಕೊನೆಯದಾಗಿ ಬರೆದಿದ್ದ ಸಾಲುಗಳು ಎಂತಹವರ ಕಣ್ಣಲ್ಲೂ ನೀರು ಬರುವಂತಿದೆ.

ಕೋಲ್ಕೊತ್ತಾ ವೈದ್ಯೆಯ ಪೋಷಕರು ತಮ್ಮ ಮಗಳ ಬಗ್ಗೆ ಮಾಧ್ಯಮಗಳ ಮುಂದೆ ಹೇಳುತ್ತಾ ಕಣ್ಣೀರು ಹಾಕಿದ್ದಾರೆ. ಆಕೆ ಓದಿನಲ್ಲಿ ತುಂಬಾ ಚುರುಕಿದ್ದಳು. ಪ್ರತಿನಿತ್ಯ 10-12 ಗಂಟೆ ಓದುತ್ತಿದ್ದಳು. ಹೀಗಾಗಿ ಆಕೆ ತನ್ನ ಕನಸಿನ ಕೋರ್ಸ್ ನ್ನು ಯಶಸ್ವಿಯಾಗಿ ಪೂರೈಸಲು ಸಾಧ್ಯವಾಯಿತು ಎಂದಿದ್ದಾರೆ.

ಅಷ್ಟೇ ಅಲ್ಲ, ಆಕೆಗೆ ಡೈರಿ ಬರೆಯುವ ಹವ್ಯಾಸವಿತ್ತು. ಕೊನೆಯದಾಗಿ ಆಕೆ ಡೈರಿಯಲ್ಲಿ ‘ನಾನು ಚೆನ್ನಾಗಿ ಓದಿ ಎಂಡಿ ಕೋರ್ಸ್ ನಲ್ಲಿ ಚಿನ್ನದ ಪದಕದೊಂದಿಗೆ ತೇರ್ಗಡೆಯಾಗಬೇಕು’ ಎಂದು ಬರೆದಿದ್ದಳು ಎಂದು ಹೇಳುತ್ತಾ ಪೋಷಕರು ಕಣ್ಣೀರು ಹಾಕುತ್ತಾರೆ. ಇದು ಆಕೆಗೆ ಓದಿನಲ್ಲಿದ್ದ ಆಸಕ್ತಿ ಮತ್ತು ಜೀವನದ ಗುರಿ ಏನಾಗಿತ್ತು ಎಂಬುದನ್ನು ತೋರಿಸುತ್ತದೆ.

ಇದೀಗ ಮಗಳನ್ನು ಕಳೆದುಕೊಂಡ ನಮ್ಮ ಜೀವನ ಛಿದ್ರವಾಗಿದೆ. ಆಕೆಯ ಓದಿಗಾಗಿ ಇಡೀ ಕುಟುಂಬವೇ ಸಾಕಷ್ಟು ತ್ಯಾಗ ಮಾಡಿದೆ. ಈಗ ಆಕೆಯ ಸಾವಿಗೆ ನ್ಯಾಯ ಸಿಗಬೇಕು ಎಂಬುದಷ್ಟೇ ನಮ್ಮ ಆಗ್ರಹ ಎಂದು ವೈದ್ಯೆಯ ತಂದೆ ಕಣ್ಣೀರು ಹಾಕುತ್ತಾ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ