ಹಮಾಸ್ ಮಾಸ್ಟರ್‌ಮೈಂಡ್‌ನ ಹತ್ಯೆ: 1200 ಜನರ ಬಲಿಗೆ ಪ್ರತೀಕಾರ ತೀರಿಸಿದ ಇಸ್ರೇಲ್

Sampriya

ಗುರುವಾರ, 1 ಆಗಸ್ಟ್ 2024 (18:13 IST)
Photo Courtesy X
ಇಸ್ರೇಲ್: ಹಮಾಸ್ ಮಿಲಿಟರಿ ಮುಖ್ಯಸ್ಥ ಮೊಹಮ್ಮದ್ ಡೀಫ್‌ನನ್ನು ಗಾಜಾದ ದಕ್ಷಿಣ ಪ್ರದೇಶವಾದ ಖಾನ್ ಯೂನಿಸ್‌ನಲ್ಲಿ ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್ ಘೋಷಣೆ ಮಾಡಿದೆ.

ಜುಲೈ 13 ರಂದು ಗಾಜಾದ ದಕ್ಷಿಣ ಪ್ರದೇಶವಾದ ಖಾನ್ ಯೂನಿಸ್‌ನಲ್ಲಿ ನಡೆಸಿದ ದಾಳಿಯಲ್ಲಿ ಹಮಾಸ್ ಮಿಲಿಟರಿ ಮುಖ್ಯಸ್ಥ ಮೊಹಮ್ಮದ್ ಡೀಫ್ ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ರಕ್ಷಣಾ ಪಡೆ ಗುರುವಾರ ದೃಢಪಡಿಸಿದೆ. ಇರಾನ್ ಮತ್ತು ಬಂಡುಕೋರರ ಗುಂಪು ಹಮಾಸ್‌ನ ನಾಯಕ ಇಸ್ಮಾಯಿಲ್ ಹನಿಯೆ ಹತ್ಯೆ ಖಚಿತಪಡಿಸಿದ ಬೆನ್ನಲ್ಲೇ ಇಸ್ರೇಲ್‌ನಿಂದ ಈ ಹೇಳಿಕೆ ಹೊರಬಿದ್ದಿದೆ.


ಕಳೆದ ತಿಂಗಳು ನಡೆದ ದಾಳಿಯಲ್ಲಿ  ಮೊಹಮ್ಮದ್ ಡೀಪ್‌ ಮೃತಪಟ್ಟಿದ್ದಾರ ಇಲ್ಲವೇ ಎಂಬುದನ್ನು ಖಚಿತಪಡಿಸಿರಲಿಲ್ಲ. ಇದೀಗ ಐಡಿಎಫ್‌ ಎಕ್ಸ್‌ ಪೋಸ್ಟ್ ಮೂಲಕ ಮೊಹಮ್ಮದ್ ಡೀಫ್ ಸಾವಿನ ಸುದ್ದಿಯನ್ನು ಘೋಷಿಸಿದೆ.

2023 ಅಕ್ಟೋಬರ್ 7 ರಂದು ಹಮಾಸ್ ನೇತೃತ್ವದ ಉಗ್ರಗಾಮಿಗಳು ಇಸ್ರೇಲ್‌ಗೆ ನುಗ್ಗಿ 1,200 ಜನರನ್ನು ಹತ್ಯೆ ಮಾಡಿ, 200 ಜನರನ್ನು ಅಪಹರಿಸಿದರ ದಾಳಿ ಪ್ರಮುಖರಲ್ಲಿ ಮೊಹಮ್ಮದ್ ಡೀಫ್ ಕೂಡಾ ಒಬ್ಬನಾಗಿದ್ದ ಎಂದು ಇಸ್ರೇಲ್ ಹೇಳಿಕೊಂಡಿದೆ. ಡೀಫ್ ಹಮಾಸ್‌ನ ಸಶಸ್ತ್ರ ವಿಭಾಗವಾದ ಇಝೆಡಿನ್ ಅಲ್-ಕಸ್ಸಾಮ್ ಬ್ರಿಗೇಡ್‌ಗಳ ಸ್ಥಾಪಕರಾಗಿದ್ದರು ಮತ್ತು ಎರಡು ದಶಕಗಳಿಂದ ಮಿಲಿಟರಿ ಬಣದ ನಾಯಕರಾಗಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ