ನವದೆಹಲಿ : ಕೇಂದ್ರ ಬಜೆಟ್ನಲ್ಲಿ ಕೃಷಿ ವಲಯಕ್ಕೆ ಸಂಬಂಧಿಸಿದಂತೆ ನೂತನ ತಂತ್ರಜ್ಞಾನಗಳ ಬೆಳವಣಿಗೆಯೊಂದಿಗೆ ಕೃಷಿಕರಿಗೆ ನೆರವಾಗಲು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಹತ್ವದ ಹೆಜ್ಜೆಯಿಟ್ಟಿದ್ದಾರೆ.
ಕಿಸಾನ್ ಸಮ್ಮಾನ್ ಯೋಜನೆ, ಸಿರಿಧಾನ್ಯಗಳ ಉತ್ಪನ್ನಗಳಿಗೆ ಆಧ್ಯತೆ, ಕೃಷಿಕರಿಗೆ ಡಿಜಿಟಲ್-ಹೈ ಟೆಕ್ ಸೇವೆ ಸಹಿತ ಹಲವು ಹೊಸ ಯೋಜನೆಗಳಿಗೆ ಬಜೆಟ್ನಲ್ಲಿ ಒತ್ತು ನೀಡಲಾಗಿದೆ. ಕಿಸಾನ್ ಸಮ್ಮಾನ್ ನಿಧಿ – 68,000 ಕೋಟಿ ರೂ. (500 ಕೋಟಿ ರೂ. ಹೆಚ್ಚಳ), ಬೆಳೆ ಸ್ಥಿರತೆ ಯೋಜನೆಗೆ ಅನುದಾನ ಕಡಿತ ಮಾಡಿದೆ. 163 ಲಕ್ಷ ರೈತರಿಗೆ 2.37 ಲಕ್ಷ ಕೋಟಿ ಎಂಎಸ್ಪಿ ನೇರ ಪಾವತಿಗೆ ಮುಂದಾಗಿದೆ.
ರಾಸಾಯನಿಕ ಮುಕ್ತ ಸಹಜ ಕೃಷಿಗೆ ರಿಯಾಯ್ತಿ ಮೂಲಕ ರೈತರಿಗೆ ಉತ್ತೇಜನ ನೀಡಲು ಹೆಜ್ಜೆಯನ್ನಿಟ್ಟಿದೆ. ಶೂನ್ಯ ಬಂಡವಾಳ ಕೃಷಿಗೆ ಒತ್ತು. ಸಣ್ಣ ರೈತರಿಗೆ ಬಾಡಿಗೆ ಯಂತ್ರ. ಸಿರಿಧಾನ್ಯಗಳ ಉತ್ಪನ್ನಗಳಿಗೆ ಒತ್ತು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ ಘೋಷಣೆ ಮಾಡಿದೆ.
ಕೃಷಿಕರಿಗೆ ಡಿಜಿಟಲ್, ಹೈ ಟೆಕ್ ಸೇವೆ ಆರಂಭಿಸಿ ಭೂ ದಾಖಲೆಗಳ ಡಿಜಿಟಲೀಕರಣ ಮತ್ತು ಬೆಳೆ ರಕ್ಷಣೆಗೆ ಕಿಸಾನ್ ಡ್ರೋನ್ ಬಳಸಲು ಅವಕಾಶ ನೀಡಿದೆ.