ಜೀವಂತವಿರುವ ಮುಖಂಡರ ಹೆಸರಿನಲ್ಲಿ ಅತ್ಯಧಿಕ ಯೋಜನೆಗಳಿಗೆ ವಾಜಪೇಯಿ ನಿದರ್ಶನ

ಬುಧವಾರ, 7 ಸೆಪ್ಟಂಬರ್ 2016 (13:17 IST)
ರಾಜಕೀಯ ಮುಖಂಡರು ಜೀವಂತವಿರುವಾಗಲೇ ಅವರ ಹೆಸರಿನಲ್ಲಿ ಅತ್ಯಧಿಕ ಸಂಖ್ಯೆಯ ಅಧಿಕೃತ ಯೋಜನೆಗಳು ಮತ್ತು ಸಂಸ್ಥೆಗಳಿರುವುದಕ್ಕೆ ಮಾಜಿ ಪ್ರಧಾನಿ ವಾಜಪೇಯಿ ನಿದರ್ಶನವಾಗಿದ್ದಾರೆ. ವರದಿಯೊಂದರ ಪ್ರಕಾರ, ಎರಡು ಅವಧಿಯ ಮಾಜಿ ಪ್ರಧಾನಮಂತ್ರಿ ವಾಜಪೇಯಿ ಅವರು ತಮ್ಮ ಸಾಧನೆಯಲ್ಲಿ ಜವಾಹರಲಾಲ್ ನೆಹರು, ಇಂದಿರಾ ಮತ್ತು ರಾಜೀವ್ ಗಾಂಧಿಯನ್ನು ಹಿಂದಿಕ್ಕಿದ್ದಾರೆ. 
 
ಏನೇ ಆದರೂ, ನೆಹರು-ಗಾಂಧಿ ಮನೆತನವು ಸಜೀವ ಅಥವಾ ಮೃತ ನಾಯಕರ ಹೆಸರಿನಲ್ಲಿರುವ ಯೋಜನೆಗಳು ಮತ್ತು ಸಂಸ್ಥೆಗಳ ಲೆಕ್ಕ ತೆಗೆದುಕೊಂಡರೆ ಉಳಿದೆಲ್ಲಾ ಮುಖಂಡರಿಗಿಂತ ಮುಂದಿದೆ. 2014ರಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹತ್ತಾರು ಅಭಿವೃದ್ಧಿ ಮತ್ತು ಜನಕಲ್ಯಾಣ ಯೋಜನೆಗಳಿಗೆ ವಾಜಪೇಯಿ ಹೆಸರು ಇಡಲಾಯಿತು.
 
ಪ್ರಧಾನಮಂತ್ರಿ ಪಿಂಚಣಿ ಯೋಜನೆಯು ಈಗ ಅಟಲ್ ಪಿಂಚಣಿ ಯೋಜನೆಯಾಗಿದ್ದು, ಎನ್‌ಡಿಎನ ಮಹತ್ವದ ಯೋಜನೆಯಾಗಿದೆ. ಸರ್ಕಾರ ಜವಾಹರಲಾಲ್ ನೆಹರು ರಾಷ್ಟ್ರೀಯ ನಗರ ನವೀಕರಣ ಯೋಜನೆಗೆ ಬದಲಿಯಾಗಿ ಕಳೆದ ವರ್ಷ ಪುನಶ್ಚೇತನ ಮತ್ತು ನಗರ ಪರಿವರ್ತನೆಗೆ ಅಟಲ್ ಯೋಜನೆಗೆ ಚಾಲನೆ ನೀಡಿದೆ.
 
ವಾಜಪೇಯಿ ಅವರಿಗೆ ಕಳೆದ ವರ್ಷ ಭಾರತ ರತ್ನ ನೀಡಲಾಗಿದ್ದು, ಬಿಜೆಪಿ ನೇತೃತ್ವದ ಸರ್ಕಾರ ಅವರ ಹುಟ್ಟುಹಬ್ಬವಾದ ಡಿ. 25ನ್ನು ಶ್ರೇಷ್ಟ ಆಡಳಿತ ದಿನವಾಗಿ ಗುರುತಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ