ರಾಮ ಸೀತೆಗೇ ಅಯೋಧ್ಯೆಯಲ್ಲಿ ಅನ್ಯಾಯವಾಗಿರುವಾಗ ಬಿಜೆಪಿ ಯಾವ ಲೆಕ್ಕ

Krishnaveni K

ಗುರುವಾರ, 6 ಜೂನ್ 2024 (14:58 IST)
ನವದೆಹಲಿ: ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಅಯೋಧ್ಯೆಯಲ್ಲಿ ಸಿಕ್ಕ ಸೋಲು ಬಿಜೆಪಿಗೆ ನುಂಗಲಾರದ ತುತ್ತಾಗಿದೆ. ಈ ಬಗ್ಗೆ ಬಿಜೆಪಿ ಬೆಂಗಲಿಗರೂ ಸೋಷಿಯಲ್ ಮೀಡಿಯಾಗಳಲ್ಲಿ ವಿಶ್ಲೇಷಣೆ ನಡೆಸುತ್ತಿದ್ದಾರೆ.

500 ವರ್ಷಗಳ ಹೋರಾಟದ ಬಳಿಕ ಮೊನ್ನೆಯಷ್ಟೇ ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ರಾಮಮಂದಿರ ನಿರ್ಮಾಣ ಮಾಡಿದ್ದು ಬಿಜೆಪಿಯ ಹೆಗ್ಗಳಿಕೆಯಾಗಿತ್ತು. ಹೀಗಾಗಿ ಈ ಬಾರಿ ಗೆಲುವು ನಮ್ಮದೇ ಎನ್ನುವ ಆತ್ಮವಿಶ್ವಾಸದಲ್ಲಿ ಬಿಜೆಪಿ ನಾಯಕರಿದ್ದರು. ಆದರೆ ಈ ಬಾರಿ ಬಿಜೆಪಿ ಅಭ್ಯರ್ಥಿ ಲಲ್ಲು ಸಿಂಗ್ ಗೆ ಅಲ್ಲಿ ಸೋಲಾಗಿತ್ತು.
ಹೀಗಾಗಿ ಇಷ್ಟೆಲ್ಲಾ ಅಯೋಧ್ಯೆಗೆ ಅಭಿವೃದ್ಧಿ ತಂದರೂ ಜನ ಬಿಜೆಪಿಯನ್ನೇ ಸೋಲಿಸಿದರಲ್ಲ ಎಂದು ಬಿಜೆಪಿ ಬೆಂಬಗಲಿಗರು ಸೋಷಿಯಲ್ ಮೀಡಿಯಾದಲ್ಲಿ ಬೇಸರ ವ್ಯಕ್ತಪಡಿಸುತ್ತಲೇ ಇದ್ದಾರೆ. ಜೊತೆಗೆ ಈ ಹಿಂದೆ ತ್ರೇತಾಯುಗದಲ್ಲಿ ರಾಮಸೀತೆಗೇ ಅಯೋಧ್ಯೆಯಲ್ಲಿ ಅನ್ಯಾಯವಾಗಿರುವಾಗ ಬಿಜೆಪಿ ಯಾವ ಲೆಕ್ಕ ಎಂದು ಕೆಲವರು ಸಮಾಧಾನಪಟ್ಟುಕೊಂಡಿದ್ದಾರೆ.

ಇದರ ಜೊತೆಗೆ ಲಲ್ಲು ಸಿಂಗ್ ಈ ಹಿಂದೆ ಶಾಸಕರಾಗಿದ್ದಾಗಲೂ ಯಾವ ಕೆಲಸವನ್ನೂ ಮಾಡುತ್ತಿರಲಿಲ್ಲ. ಅವರನ್ನು ಅಲ್ಲಿ ಅಭ್ಯರ್ಥಿಯಗಿ ಕಣಕ್ಕಿಳಿಸುವುದಕ್ಕೆ ಸ್ಥಳೀಯರಿಂದಲೇ ವಿರೋಧವಿತ್ತು. ಹಾಗಿದ್ದರೂ ಕಣಕ್ಕಿಳಿಸಿದ್ದರಿಂದಲೇ ಸೋತರು ಎಂಬ ಮಾತು ಕೇಳಿಬರುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ