ಪತ್ನಿಗಾಗಿ 90 ಸಾವಿರ ರೂ.ಗಳ ಬೈಕ್ ಖರೀದಿಸಿದ ಭಿಕ್ಷುಕ
ಮಧ್ಯಪ್ರದೇಶದ ಸಂತೋಷ್ ಕುಮಾರ್ ಎಂಬ ದಿವ್ಯಾಂಗನಾಗಿದ್ದು, ಆತನ ಪತ್ನಿಯ ಜೊತೆಗೆ ಕೈ ಗಾಡಿಯಲ್ಲಿ ನಗರದಲ್ಲಿ ಭಿಕ್ಷೆ ಬೇಡುತ್ತಾ ಜೀವನ ನಡೆಸುತ್ತಿದ್ದ.
ಆದರೆ ಇತ್ತೀಚೆಗೆ ಪತ್ನಿಗೆ ಬೆನ್ನು ನೋವಿನ ಸಮಸ್ಯೆ ಹೆಚ್ಚಾಗಿದ್ದು, ಗಾಡಿ ತಳ್ಳಲು ಕಷ್ಟವಾಗುತ್ತಿತ್ತು. ಹೀಗಾಗಿ ಈತ 90 ಸಾವರ ಮೌಲ್ಯದ ಬೈಕ್ ಖರೀದಿಸಿದ್ದಾನೆ. ಕಳೆದ ನಾಲ್ಕು ವರ್ಷಗಳಿಂದ ಸಂಗ್ರಹಿಸಿಟ್ಟ ಹಣದಲ್ಲಿ ಬೈಕ್ ಖರೀದಿಸಿರುವುದಾಗಿ ಹೇಳಿದ್ದಾನೆ. ಈತನ ವಿಡಿಯೋ ಈಗ ವೈರಲ್ ಆಗಿದೆ.