ಜಾಕೋಬಿಂಟೆ ಸ್ವರ್ಗರಾಜ್ಯಂ ಎನ್ನುವ ಸಿನೆಮಾದಿಂದ ಮಲೆಯಾಳಂ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಕೋರಮಂಗಲ ನಿವಾಸಿಯಾದ ರೆಬಾ ಮೊನಿಕಾ ಜಾನ್, ಆರೋಪಿ ಫ್ರಾಂಕ್ಲಿನ್ ವಿಸಿಲ್ ವಿರುದ್ಧ ಮಡಿವಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಹಿನ್ನೆಲೆಯಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ,
ಕಳೆದ 13 ವರ್ಷಗಳಿಂದ ಬೆಂಗಳೂರು ನಿವಾಸಿಯಾಗಿರುವ ರೆಬಾ ಮೋನಿಕಾ ಜಾನ್, ಪ್ರತಿ ರವಿವಾರ ಮಡಿವಾಳದ ಹೊಸೂರು ರಸ್ತೆಯಲ್ಲಿರುವ ಸೇಂಟ್ ಅಂಥೋನಿ ಚರ್ಚ್‌ಗೆ ಭೇಟಿ ನೀಡುತ್ತಿದ್ದರು. ಆರೋಪಿ ಫ್ರಾಂಕ್ಲಿನ್ ವಿಸಿಲ್ ನಿರಂತರವಾಗಿ ಫಾಲೋ ಮಾಡುತ್ತಿರುವುದಲ್ಲದೇ ಮೊಬೈಲ್‌ಗೆ ವಿವಾಹವಾಗುವಂತೆ ಒತ್ತಡ ಹೇರುತ್ತಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದರು.