ಹಕ್ಕಿ ಜ್ವರ ಭೀತಿ: ಕೇರಳದಲ್ಲಿ ಬಾತುಕೋಳಿಗಳ ಮಾರಣಹೋಮಕ್ಕೆ ಸಿದ್ಧತೆ

ಮಂಗಳವಾರ, 5 ಜನವರಿ 2021 (10:29 IST)
ಕೊಚ್ಚಿ: ಕೇರಳದ ಸೇರಿದಂತೆ ದೇಶದ ನಾಲ್ಕು ರಾಜ್ಯಗಳಲ್ಲಿ ಹಕ್ಕಿ ಜ್ವರ ಭೀತಿ ಆವರಿಸಿದೆ. ಹೀಗಾಗಿ ಸಾವಿರಾರು ಬಾತುಕೋಳಿಗಳ ಮಾರಣಹೋಮಕ್ಕೆ ಸಿದ್ಧತೆ ನಡೆಸಲಾಗಿದೆ.


ಕೇರಳದಲ್ಲಿ ಸುಮಾರು 40 ಸಾವಿರ ಬಾತುಕೋಳಿಗಳ ಹನನಕ್ಕೆ ಸಿದ್ಧತೆ ನಡೆಸಲಾಗಿದೆ. ಈಗಾಗಲೇ 12 ಸಾವಿರ ಹಕ್ಕಿಗಳನ್ನು ಕೊಲ್ಲಲಾಗಿದೆ. ಕೊಟ್ಟಾಯಂ, ಆಲಪ್ಪುಳ ಜಿಲ್ಲೆಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡ ಹಿನ್ನಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿದೆ. ಜ್ವರ ಕಾಣಿಸಿಕೊಂಡ 1 ಕಿ.ಮೀ. ವ್ಯಾಪ್ತಿಯಲ್ಲಿರುವ ಎಲ್ಲಾ ಬಾತುಕೋಳಿಗಳನ್ನು ಕೊಲ್ಲಲಾಗಿದೆ.  ಹಕ್ಕಿಗಳಿಂದ ಮಾನವರಿಗೆ ವೈರಸ್ ಅಪಾಯವಿರುವುದರಿಂದ ಸ್ಥಳೀಯಾಡಳಿತ ಈ ಕ್ರಮಕ್ಕೆ ಮುಂದಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ