ಸಹರಾ ಲಂಚ: ರಾಹುಲ್ ಗಾಂಧಿ ವಿರುದ್ಧ ಸುಬ್ರಹ್ಮಣ್ಯಂ ಸ್ವಾಮಿ ಟ್ವಿಟ್ಟರ್ ಸಮರ

ಭಾನುವಾರ, 25 ಡಿಸೆಂಬರ್ 2016 (11:42 IST)
ಪ್ರಧಾನಿ ಮೋದಿ ಸಹರಾ ಸಂಸ್ಥೆಯಿಂದ ಕೋಟಿ ಕೋಟಿ ಹಣ ಪಡೆದಿದ್ದಾರೆ ಎಂದು ಆರೋಪಿಸಿದ್ದ ರಾಹುಲ್ ಗಾಂಧಿ ವಿರುದ್ದ ಬಿಜೆಪಿ ಮುಖಂಡ ಸುಬ್ರಹ್ಮಣ್ಯಂ ಸ್ವಾಮಿ ಸಾಮಾಜಿಕ ಅಂತರ್ಜಾಲ ತಾಣದಲ್ಲಿ ಸಮರ ಸಾರಿದ್ದಾರೆ.
 
ಕಳೆದ 2014 ಲೋಕಸಭೆ ಚುನಾವಣೆಯಲ್ಲಿ ಅಮೇಥಿಯಲ್ಲಿ ನಾಮಪತ್ರ ಸಲ್ಲಿಸಲು ರಾಹುಲ್ ಗಾಂಧಿ ಸಹರಾ ಸಂಸ್ಥೆಗೆ ಸೇರಿದ ಕಾರು ಬಳಸಿದ್ದರು ಎಂದು ಟ್ವಿಟ್ಟರ್‌ನಲ್ಲಿ ಟ್ವಿಟ್ ಮಾಡಿ ರಣಕಹಳೆ ಮೊಳಗಿಸಿದ್ದಾರೆ. 
 
ಘಟಾನುಘಟಿ ರಾಜಕಾರಣಿಗಳೊಂದಿಗೆ ಸಾಮಾಜಿಕ ಅಂತರ್ಜಾಲ ತಾಣಗಳಲ್ಲಿ ಶಬ್ದಗಳ ಸಮರ ಸಾರುವ ಸ್ವಾಮಿ ಇದೀಗ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಸಮರ ಸಾರಿದ್ದಾರೆ. 
 
ಪ್ರದಾನಿ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಸಹಾರಾ ಮತ್ತು ಬಿರ್ಲಾ ಕಂಪೆನಿಗಳಿಂದ ಹಣ ಪಡೆದಿದ್ದರು. ಅವರ ವೈಯಕ್ತಿಕ ಭ್ರಷ್ಟಾಚಾರ ಬಹಿರಂಗಪಡಿಸಿದಲ್ಲಿ ಭೂಕಂಪವಾಗುತ್ತದೆ. ಎಂದು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ