ಕೊನೆಗೂ ಪ್ರಧಾನಿ ಮೋದಿಗೆ ಆಪ್ತ ಗೆಳೆಯನ ಉಳಿಸಿಕೊಳ್ಳಲು ಆಗಲೇ ಇಲ್ಲ!
ಶುಕ್ರವಾರ, 16 ಮಾರ್ಚ್ 2018 (10:41 IST)
ನವದೆಹಲಿ: ಬಿಜೆಪಿ-ಟಿಡಿಪಿ ಮುನಿಸು ಕೊನೆಯ ಘಟ್ಟಕ್ಕೆ ತಲುಪಿದೆ. ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕೊಡದ ಮುನಿಸಿಗೆ ಟಿಡಿಪಿ ಬಿಜೆಪಿಯೊಂದಿಗಿನ ಬಹು ವರ್ಷಗಳ ಮೈತ್ರಿಗೆ ತಿಲಾಂಜಲಿ ಇತ್ತಿದೆ.
ಕಳೆದ ವಾರವಷ್ಟೇ ಇದೇ ಕಾರಣಕ್ಕೆ ಟಿಡಿಪಿಯ ಇಬ್ಬರು ಸಚಿವರು ಕೇಂದ್ರ ಸಚಿವ ಸಂಪುಟಕ್ಕೆ ರಾಜೀನಾಮೆಯಿತ್ತಿದ್ದರು. ಉತ್ತರ ಪ್ರದೇಶದಲ್ಲಿ ಬಿಜೆಪಿ ಉಪಚುನಾವಣೆಯಲ್ಲಿ ಸೋತ ಬಳಿಕ ತಮ್ಮ ಶಾಸಕರು, ಸಂಸಂದರ ಸಭೆ ಕರೆದ ತೆಲಗುದೇಶಂ ನಾಯಕ, ಸಿಎಂ ಚಂದ್ರಬಾಬು ನಾಯ್ಡು ಮೈತ್ರಿ ಕಡಿದುಕೊಳ್ಳುವ ನಿರ್ಧಾರಕ್ಕೆ ಬಂದಿದ್ದರು.
ಇದೀಗ ಅಧಿಕೃತವಾಗಿ ಮೈತ್ರಿ ಮುರಿದುಕೊಂಡಿದ್ದಾರೆ. ಇದರೊಂದಿಗೆ ಬಹುವರ್ಷಗಳ ಮೈತ್ರಿ ಕಡಿದು ಬಿದ್ದಿದೆ. ಅತ್ತ ಪ್ರಧಾನಿ ಮೋದಿ ಆಪ್ತ ಮೈತ್ರಿಯನ್ನು ಉಳಿಸಿಕೊಳ್ಳಲಾಗದೇ ಹೋದರು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ