ಬ್ಲೂ ವೇಲ್ ಗೇಮ್ಸ್ ನಲ್ಲಿ ಸಾಯುವ ಟಾಸ್ಕ್ ಗೆ ಮುಂದಾಗುವುದೇಕೆ ಗೊತ್ತಾ?!

ಬುಧವಾರ, 6 ಸೆಪ್ಟಂಬರ್ 2017 (08:48 IST)
ನವದೆಹಲಿ: ಬ್ಲೂ ವೇಲ್ ಗೇಮ್ಸ್..! ಇತ್ತೀಚೆಗೆ ಪೋಷಕರ ನಿದ್ದೆಗೆಡಿಸಿದ ಅಪಾಯಕಾರಿ ಮೊಬೈಲ್ ಗೇಮ್. ಇದು ಅಪಾಯಕಾರಿ ಎಂದು ಗೊತ್ತಿದ್ದರೂ ಮಕ್ಕಳು ಈ ಗೇಮ್ಸ್ ಗೆ ಬಲಿಯಾಗುತ್ತಿರುವುದೇಕೆ ಗೊತ್ತಾ?

 
ಈ ಗೇಮ್ಸ್ ಗೆ ಬಲಿಯಾಗಲು ಹೊರಟಿದ್ದ ಜೋಧ್ ಪುರದ ಬಾಲಕಿಯೊಬ್ಬಳು ಇದನ್ನು ಬಾಯ್ಬಿಟ್ಟಿದ್ದಾಳೆ. 17 ವರ್ಷದ ಬಾಲಕಿ ಬಿಎಸ್ ಎಫ್ ಯೋಧರೊಬ್ಬರ ಪುತ್ರಿ.

ಈಕೆ ಈ ಗೇಮ್ಸ್ ಆಡುತ್ತಿದ್ದಳು. ಅಂತಿಮ ಸುತ್ತಿನಲ್ಲಿ ಆಕೆ ಎತ್ತರದಿಂದ ಜಿಗಿಯಬೇಕಿತ್ತು. ಅದಕ್ಕಾಗಿ ಮನೆ ಬಿಟ್ಟು ಹೊರಟಿದ್ದಳು. ಆದರೆ ಟಾಸ್ಕ್ ನಲ್ಲಿದ್ದಂತೆ ಹಾರುವ ಮೊದಲು ಅಳುತ್ತಾ ಕೂತಿದ್ದ ಆಕೆಯನ್ನು ಸ್ಥಳೀಯರೊಬ್ಬರು ರಕ್ಷಿಸಿದರು.

ಆಕೆಯ  ಬಳಿ ವಿವರ ಕೇಳಿದಾಗ ತಾನು ಬ್ಲೂ ವೇಲ್ ಗೇಮ್ಸ್ ಆಡುತ್ತಿರುವುದಾಗಿ ಬಾಯಿ ಬಿಟ್ಟಿದ್ದಾಳೆ. ಒಂದು ವೇಳೆ ಈ ಅಂತಿಮ ಟಾಸ್ಕ್ ಮಾಡದಿದ್ದರೆ ತನ್ನ ತಾಯಿ ಸಾಯುತ್ತಾರೆ ಎಂದು ಆಕೆ ಅಳುತ್ತಲೇ ಈ ಗೇಮ್ಸ್ ತಂದಿಡುವ ಸಂಕಟ ವಿವರಿಸಿದ್ದಾಳೆ. ಅಂದರೆ ಈ ರೀತಿ ಬೆದರಿಕೆ ಹಾಕುವ ಮೂಲಕ ಅಮಾಯಕರನ್ನು ಈ ಗೇಮ್ಸ್ ಬಲಿ ತೆಗೆದುಕೊಳ್ಳುತ್ತಿದೆ ಎಂದು ಬಹಿರಂಗವಾಗಿದೆ.

ಇದನ್ನೂ ಓದಿ.. ನಾನೂ ಕೊಹ್ಲಿ ಆಗಬಲ್ಲೆ ಎಂದ ಬಾಂಗ್ಲಾ ಬ್ಯಾಟ್ಸ್ ಮನ್ ಮಾನ ಕಳೆದ ಟ್ವಿಟರಿಗರು
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ