ತಂಗಿಗೆ ಮದ್ಯ ಕುಡಿಸಿ ಇವನು ಮಾಡಿದ ದುಷ್ಕೃತ್ಯವೇನು ಗೊತ್ತಾ?
ಶುಕ್ರವಾರ, 31 ಆಗಸ್ಟ್ 2018 (15:14 IST)
ನವದೆಹಲಿ: ಸಹೋದರನೊಬ್ಬ ತನ್ನ ಸಹೋದರಿಗೆ ಮದ್ಯ ಕುಡಿಸಿ ಕಿರುಕುಳ ನೀಡಿದ ಹೀನಾಯ ಘಟನೆಯೊಂದು ಕಾರ್ಟಪುರಿ ಗ್ರಾಮದಲ್ಲಿ ನಡೆದಿದೆ.
10 ವರ್ಷದ ಬಾಲಕಿಯ ಮೇಲೆ 22 ವರ್ಷದ ಅಣ್ಣ ತನ್ನ ದುಷ್ಕೃತ್ಯವನ್ನು ಮೆರೆದಿದ್ದಾನೆ. ತಂಗಿಯ ಕೋಣೆಗೆ ಬಂದ ಅಣ್ಣ ಅವಳ ಖಾಸಗಿ ಅಂಗವನ್ನು ಮುಟ್ಟಿದ್ದಲ್ಲದೆ ಅವಳ ಜತೆ ತೀರಾ ಕೆಟ್ಟದ್ದಾಗಿ ನಡೆದುಕೊಂಡಿದ್ದಾನೆ.
ಅಣ್ಣನ ಈ ಕೃತ್ಯಕ್ಕೆ ಮನನೊಂದ ಬಾಲಕಿ ಕೂಗಿಕೊಳ್ತಿದ್ದಂತೆ ಪಕ್ಕದ ಮನೆಯವರು ಮನೆಗೆ ಬಂದಿದ್ದಾರೆ. ತಕ್ಷಣ ಆರೋಪಿ ಅಲ್ಲಿಂದ ನಾಪತ್ತೆಯಾಗಿದ್ದಾನೆ. ಪಕ್ಕದ ಮನೆಯಾಕೆ ಬಾಲಕಿ ತಾಯಿಗೆ ಈ ವಿಷಯವನ್ನು ತಿಳಿಸಿದ್ದಾಳೆ. ಬಾಲಕಿ ಪ್ರಜ್ಞೆ ತಪ್ಪಿ ಬಿದ್ದಿದ್ದಳು ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.