ಟಿಎಂ ಕೃಷ್ಣ ವಿರುದ್ಧ ಸಿಡಿದು ನಿಂತು ಶಾಸ್ತ್ರೀಯ ಸಂಗೀತ ಗಾಯಕರು

Krishnaveni K

ಶುಕ್ರವಾರ, 22 ಮಾರ್ಚ್ 2024 (14:02 IST)
Photo Courtesy: Twitter
ಚೆನ್ನೈ: ಕರ್ನಾಟಕ ಶಾಸ್ತ್ರೀಯ ಸಂಗೀತ ಲೋಕದಲ್ಲಿ ಈಗ ಕೋಲಾಹಲವೆದ್ದಿದೆ. ಖ್ಯಾತ ಶಾಸ್ತ್ರೀಯ ಗಾಯಕ ಟಿಎಂ ಕೃಷ್ಣ ವಿರುದ್ಧ ಕರ್ನಾಟಕ ಶಾಸ್ತ್ರೀಯ ಸಂಗೀತ ದಿಗ್ಗಜರು ಸಿಡಿದೆದ್ದಿದ್ದಾರೆ.

ಇತ್ತೀಚೆಗೆ ಮದ್ರಾಸ್ ಮ್ಯೂಸಿಕ್ ಅಕಾಡಮಿ ಟಿಎಂ ಕೃಷ್ಣ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿತ್ತು. ಆದರೆ ಇದು ಇತರೆ ವಾಗ್ಗೇಯಕಾರರಿಗೆ ಇಷ್ಟವಾಗಿಲ್ಲ. ಕಾರಣ ಟಿಎಂ ಕೃಷ್ಣ ಬ್ರಾಹ್ಮಣ ವಿರೋಧಿ ಮತ್ತು ಹಿರಿಯ ವಿಧ‍್ವಾಂಸರ ಬಗೆಗೆ ಹೊಂದಿರುವ ವಿರೋಧಿ ನಿಲುವು.

ಕರ್ನಾಟಕ ಸಂಗೀತ ಲೋಕದ ದಿಗ್ಗಜರಾದ ಎಂಎಸ್ ಸುಬ್ಬಲಕ್ಷ್ಮಿ, ಮುತ್ತುಸ್ವಾಮಿ ದೀಕ್ಷಿತರ್ ಮುಂತಾದ ದಿಗ್ಗಜರನ್ನು ಟಿಎಂ ಕೃಷ್ಣ ಕುಹುಕವಾಡುತ್ತಾರೆ. ನಮ್ಮ ಸಾಂಪ್ರದಾಯಿಕ ಸಂಗೀತ ಪರಂಪರೆಯನ್ನೇ ಪ್ರಶ್ನಿಸುತ್ತಾರೆ. ಅಂತಹ ವ್ಯಕ್ತಿಗೆ ಪ್ರಶಸ್ತಿ ನೀಡಿರುವುದು ಸರಿಯಲ್ಲ ಎಂದು ಖ್ಯಾತ ಗಾಯಕರಾದ ರಂಜಿನಿ & ಗಾಯತ್ರಿ, ತ್ರಿಚ್ಚೂರ್ ಬ್ರದರ್ಸ್ ಸೇರಿದಂತೆ ಅನೇಕ ದಿಗ್ಗಜ ಕಲಾವಿದರು ತಮಗೆ ನೀಡಿದ ಪ್ರಶಸ್ತಿಯನ್ನು ಮರಳಿಸಿರುವುದಲ್ಲದೆ, ಮದ್ರಾಸ್ ಮ್ಯೂಸಿಕ್ ಅಕಾಡಮಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸದೇ ಇರಲು ನಿರ್ಧರಿಸಿದ್ದಾರೆ.

ಈ ಬಗ್ಗೆ ಈಗ ಸಂಗೀತ ಲೋಕದ ದಿಗ್ಗಜರು ಸೋಷಿಯಲ್ ಮೀಡಿಯಾ ಮೂಲಕ ತಮ್ಮ ಪ್ರತಿಭಟನೆಯನ್ನು ಮತ್ತು ಕಾರ್ಯಕ್ರಮ ಹಿಂಪಡೆಯುತ್ತಿರುವುದಾಗಿ ಬಹಿಷ್ಕಾರದ ಪತ್ರ ಬರೆಯುತ್ತಿದ್ದಾರೆ. ಇದು ಕರ್ನಾಟಕ ಸಂಗೀತ ಲೋಕದಲ್ಲಿ ಕೋಲಾಹಲ ಸೃಷ್ಟಿಸಿದೆ. ಆದರೆ ಈ ಬಗ್ಗೆ ಇದುವರೆಗೆ ಟಿಎಂ ಕೃಷ್ಣ ಪ್ರತಿಕ್ರಿಯೆ ನೀಡಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ