10ನೇ ತರಗತಿ ಮತ್ತು ಪಿಯುಸಿ ದ್ವಿತಿಯ ಪರೀಕ್ಷೆಗಾಗಿ ಒಟ್ಟು 31,14,821 ವಿದ್ಯಾರ್ಥಿಗಳು ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದರು. ಅದರಲ್ಲಿ 28 ತೃತಿಯ ಲಿಂಗಿಗಳು ಸೇರಿದ್ದಾರೆ. ದೇಶದಾದ್ಯಂತ 4974 ಕೇಂದ್ರಗಳಲ್ಲಿ ಹಾಗೂ 78 ವಿದೇಶಿ ಕೇಂದ್ರಗಳಲ್ಲಿ ನಡೆಸಲಾಗಿತ್ತು.
ಒಟ್ಟು ಪಿಯುಸಿ ದ್ವಿತೀಯ ಪರೀಕ್ಷೆಗಾಗಿ 13 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು.
ಸಿಬಿಎಸ್‌ಇ ಪರೀಕ್ಷಾ ಫಲಿತಾಶಂವನ್ನು ಎಲ್ಲಿ ನೋಡಬಹುದು?
ಸಿಬಿಎಸ್‌ಇ ಪಿಯುಸಿ ದ್ವಿತೀಯ ಆರ್ಟ್ಸ್, ಸೈನ್ಸ್ ಮತ್ತು ಕಾಮರ್ಸ್ ವಿದ್ಯಾರ್ಥಿಗಳ ಫಲಿತಾಂಶ ಆನ್‌ಲೈನ್ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ವಿದ್ಯಾರ್ಥಿಗಳು ಇಲ್ಲಿ ತೋರಿಸಿದ ವೆಬ್‌ಸೈಟ್‌ಗಳಲ್ಲಿ cbse.examresults.net, cbseresults.nic.in and results.gov.in. ತಮ್ಮ ಫಲಿತಾಂಶ ಪಡೆಯಬಹುದು.