ಸುಷ್ಮಾ ಸ್ವರಾಜ್ ಸಾವಿಗೆ ಕಂಬನಿ ಮಿಡಿದ ಸೆಲೆಬ್ರಿಟಿಗಳು

ಬುಧವಾರ, 7 ಆಗಸ್ಟ್ 2019 (10:12 IST)
ನವದೆಹಲಿ: ಮಾಜಿ ವಿದೇಶಾಂಗ ಸಚಿವೆ, ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಹಠಾತ್ ನಿಧನಕ್ಕೆ ಸಿನಿಮಾ, ಕ್ರೀಡಾ ಲೋಕದ ಸೆಲೆಬ್ರಿಟಿಗಳು ಆಘಾತ ವ್ಯಕ್ತಪಡಿಸಿದ್ದಾರೆ.


ಬಾಲಿವುಡ್ ನಟರಾದ ಅಮಿತಾಭ್ ಬಚ್ಚನ್, ಸಂಜಯ್ ದತ್, ಅನುಷ್ಕಾ ಶರ್ಮಾ, ಸ್ಯಾಂಡಲ್ ವುಡ್ ನಟಿ ಹರಿಪ್ರಿಯಾ, ಜಗ್ಗೇಶ್, ಕಿರುತೆರೆ ಕಲಾವಿದರು ತಮ್ಮ ಸಾಮಾಜಿಕ ಜಾಲತಾಣ ಪುಟಗಳಲ್ಲಿ ಸುಷ್ಮಾ ಸ್ವರಾಜ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

ಇನ್ನು ಕ್ರಿಕೆಟಿಗರಾದ ವೀರೇಂದ್ರ ಸೆಹ್ವಾಗ್, ವಿವಿಎಸ್‍ ‍ಲಕ್ಷ್ಮಣ್, ಅನಿಲ್ ಕುಂಬ್ಳೆ,  ಸುರೇಶ್ ರೈನಾ, ರವಿಚಂದ್ರನ್ ಅಶ್ವಿನ್,  ಗೌತಮ್ ಗಂಭೀರ್, ಮೊಹಮ್ಮದ್ ಕೈಫ್ ಮತ್ತಿತರರೂ ಸುಷ್ಮಾ ಸಾವಿಗೆ ಆಘಾತ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ