ಇನ್ಮುಂದೆ ಲಡಾಕ್ ಮೂಲದ ಕ್ರಿಕೆಟಿಗರೂ ಜಮ್ಮು ರಣಜಿ ತಂಡಕ್ಕೆ ಸೇರ್ಪಡೆ
ಬುಧವಾರ, 7 ಆಗಸ್ಟ್ 2019 (09:30 IST)
ಮುಂಬೈ: ಕೇಂದ್ರ ಸರ್ಕಾರ ಆರ್ಟಿಕಲ್ 370 ರದ್ದುಗೊಳಿಸಿ ಜಮ್ಮು ಕಾಶ್ಮೀರವನ್ನು ಇಬ್ಬಾಗ ಮಾಡಿ ಲಡಾಕ್ ಗೆ ಕೇಂದ್ರಾಡಳಿತ ಸ್ಥಾನ ಮಾನ ಮಾಡಿದ ಮೇಲೆ ಕ್ರಿಕೆಟಿಗರ ಕತೆಯೇನು ಎಂಬ ಪ್ರಶ್ನೆಗೆ ಬಿಸಿಸಿಐ ಸಿಇಒ ವಿನೋದ್ ರಾಯ್ ಪ್ರತಿಕ್ರಿಯಿಸಿದ್ದಾರೆ.
ಲಡಾಕ್ ಪ್ರದೇಶವನ್ನು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶ ಎಂದು ಕೇಂದ್ರ ಸರ್ಕಾರ ಭಾಗ ಮಾಡಿದರೂ ಇಲ್ಲಿನ ಉದಯೋನ್ಮುಖ ಕ್ರಿಕೆಟಿಗರು ಜಮ್ಮು ಕಾಶ್ಮೀರ ಕ್ರಿಕೆಟ್ ಮಂಡಳಿಯ ಅಧೀನದಲ್ಲೇ ದೇಶೀಯ ಕ್ರಿಕೆಟ್ ನ್ನು ಪ್ರತಿನಿಧಿಸಲಿದ್ದಾರೆ. ಸದ್ಯಕ್ಕೆ ಲಡಾಕ್ ಗೆ ಪ್ರತ್ಯೇಕ ಕ್ರಿಕೆಟ್ ಮಂಡಳಿ ಸ್ಥಾಪಿಸುವ ಯೋಜನೆಯಿಲ್ಲ ಎಂದು ವಿನೋದ್ ರಾಯ್ ಹೇಳಿದ್ದಾರೆ.
ಲಡಾಕ್ ಪ್ರದೇಶದ ಪ್ರತಿಭಾನ್ವಿತ ಯುವ ಕ್ರಿಕೆಟಿಗರಿಗೆ ರಣಜಿ ಸೇರಿದಂತೆ ದೇಶೀಯ ಟೂರ್ನಿಗಳಲ್ಲಿ ಜಮ್ಮು ಕಾಶ್ಮೀರ ತಂಡದಲ್ಲೇ ಅವಕಾಶ ನೀಡಲಾಗುವುದು ಎಂದು ವಿನೋದ್ ರಾಯ್ ಸ್ಪಷ್ಟಪಡಿಸಿದ್ದಾರೆ.