ಹನ್ನೆರಡೇ ದಿನದಲ್ಲಿ ಸಾವಿರ ಕೋಟಿ ದಾಟಿದ ಚಂದ್ರಬಾಬು ನಾಯ್ಡು ಕುಟುಂಬದ ಆಸ್ತಿ

Krishnaveni K

ಸೋಮವಾರ, 10 ಜೂನ್ 2024 (13:51 IST)
ಹೈದರಾಬಾದ್: ಲೋಕಸಭೆ ಚುನಾವಣೆ 2024 ರ ಫಲಿತಾಂಶದ ಬಳಿಕ ಚಂದ್ರಬಾಬು ನಾಯ್ಡು ಅದೃಷ್ಟ ಖುಲಾಯಿಸಿದೆ. ಕಳೆದ ಹನ್ನೆರಡೇ ದಿನದಲ್ಲಿ ಅವರ ಆಸ್ತಿ ದುಪ್ಪಟ್ಟಾಗಿದೆ .1200 ಕೋಟಿ ರೂ. ದಾಟಿದೆ.

ಲೋಕಸಭೆ ಚುನಾವಣೆಯ ಎಕ್ಸಿಟ್ ಪೋಲ್ ಫಲಿತಾಂಶದ ಬಳಿಕ ಷೇರು ಮಾರುಕಟ್ಟೆ ಏಕೇಏಕಿ ಏರಿಕೆಯಾಗಿತ್ತು. ಇದರ ಪರಿಣಾಮ ಚಂದ್ರಬಾಬು ನಾಯ್ಡು ಕುಟುಂಬದ ಒಡೆತನದ ಹೆರಿಟೇಜ್ ಫುಡ್ಸ್ ಷೇರು ಕೂಡಾ ಭಾರೀ ಏರಿಕೆಯಾಗಿದೆ. ಅದರಲ್ಲೂ ಚಂದ್ರಬಾಬು ನಾಯ್ಡು ಎನ್ ಡಿಎ ಜೊತೆ ಕೈ ಜೋಡಿಸಿದ ಬಳಿಕ ಷೇರು ಮಾರುಕಟ್ಟೆ ಮತ್ತೆ ಏರಿಕೆಯಾಗಿದೆ.

ಇದೀಗ ಕೇಂದ್ರದಲ್ಲಿ ಎನ್ ಡಿಎ ಅಧಿಕಾರಕ್ಕೆ ಬರುತ್ತಿದ್ದಂತೇ ಚಂದ್ರಬಾಬು ನಾಯ್ಡು ಕುಟುಂಬದ ಹೆರಿಟೇಜ್ ಫುಡ್ಸ್ ಷೇರುಗಳ ಬೆಲೆ 1,225 ಕೋಟಿ ರೂ. ದಾಟಿದೆ. ಇದಕ್ಕೆ ಮೊದಲು ಮೇ 23 ರಂದು ಹೆರಿಟೇಜ್ ಷೇರು 354 ಕೋಟಿ ರೂ.ಗೆ ಬಂದು ನಿಂತಿತ್ತು. ಆದರೆ ಜೂನ್ 3 ರಿಂದ ಜೂನ್ 10 ರವರೆಗಿನ ಅವಧಿಯಲ್ಲಿ ಇದರ ಬೆಲೆ ಸಾವಿರ ಕೋಟಿ ರೂ. ದಾಟಿದೆ.

ಹೆರಿಟೇಜ್ ಫುಡ್ಸ್ ಕಂಪನಿಯ ಸಂಸ್ಥಾಪಕರು ಚಂದ್ರಬಾಬು ನಾಯ್ಡು. ಈ ಕಂಪನಿಯಲ್ಲಿ ಪ್ರಸಕ್ತ ಚಂದ್ರಬಾಬು ನಾಯ್ಡು ಕುಟುಂಬ ಶೇ. 35.71 ಷೇರು ಹೊಂದಿದೆ. ಈ ಕಂಪನಿಯಲ್ಲಿ ಚಂದ್ರಬಾಬು ಪತ್ನಿ ಭುವನೇಶ್ವರಿ ನಾರಾ, ಪುತ್ರ ನರಾ ಲೋಕೇಶ್, ಮೊಮ್ಮಗ ದೇವಾಂಶ್ ನರಾ, ಸೊಸೆ ನರಾ ಬ್ರಹ್ಮಣಿಗೂ ಪಾಲುದಾರಿಕೆಯಿದೆ. ಇದೀಗ ಕೇಂದ್ರದಲ್ಲಿ ಎನ್ ಡಿಎ ಅಧಿಕಾರಕ್ಕೆ ಬಂದೊಡನೆಯೇ ಚಂದ್ರಬಾಬು ನಾಯ್ಡು ಕುಟುಂಬಕ್ಕೆ ಭರ್ಜರಿ ಲಾಭವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ