ವಿಶ್ವದ ದೊಡ್ಡಣ್ಣನಿಗೆ ಗುನ್ನ ಇಡಲು ಚೀನಾ ಹೆಣೆದಿದ್ಯಾ ರಣತಂತ್ರ....?

geetha

ಸೋಮವಾರ, 12 ಫೆಬ್ರವರಿ 2024 (20:22 IST)
ಅಮೆರಿಕಾ ಅಧ್ಯಕ್ಷ ಬೈಡೆನ್
ನವದೆಹಲಿ-ತೊಂದರೆ ಕೊಡೋದು, ಮೋಸ ಮಾಡೋದು, ಬೆನ್ನ ಹಿಂದೆ ನಿಂತೂ ಚೂರಿ ಹಾಕೋ ಬುದ್ದಿ ಚೀನಾಗೆ ಹೊಸದೇನಲ್ಲ.. ದಶಕಗಳಿಂದ ಚೀನಾ ಇದೇ ಅಶುದ್ದ ಕಾಯಕವನ್ನು ಮಾಡ್ತಾ ಬಂದು ಬಿಟ್ಟಿದೆ.ತಂಟೆ ಮಾಡುವ ಗುಣ ಅಂತ ಯಾರಿಗಾದ್ರು ಇದ್ರೆ, ಅದು ಜಗತ್ತಿನ ಮುಂದೆ ಕಳ್ಳ ಮುಖವಾಡವನ್ನು ಹಾಕಿಕೊಂಡಿರುವ ಚೀನಾಗೆ ಅಕ್ಷರಶಃ ಅನ್ವಹಿಸುತ್ತೆ.. ಅದೇ ರೀತಿಯಾಗಿ ಚೀನಾ ಮತ್ತೊಂದು ಪಿತೂರಿಯ ಕೆಲಸವನ್ನು ಮಾಡಲು ಬಿಗ್‌ಪ್ಲಾನ್ ಹಾಕಿಕೊಂಡಿದೆ ಅಂತ ಹೇಳಲಾಗ್ತಿದೆ.ಚೀನಾ ಅಂದ್ರೆ ಮೊಸ್ಟ್ ಡೇಂಜರಸ್ ಕಂಟ್ರಿ.ಲ್ಪ ಯಾಮಾರಿದ್ರೂ ನಂಬಿದವರನ್ನೆ ಅತಂತ್ರವಾಗಿಸಿ ಬಿಡುವ ಜಾಯಮಾನಕ್ಕೆ ಸೇರಿದ ದೇಶ... ಜೊತೆಯಲ್ಲೆ ಇದ್ದು ಬೆನ್ನಿಗೆ ಚೂರಿ ಹಾಕ್ತಾರೆ ಅಂತರಲ್ಲ ಹಾಗೇ ಇದರ ಮೂಲ ಕಸುಬು.

ಚೀನಾ ಸೂಪರ್ ಪವರ್ ಆಗುವ ಹಪಾಹಪಿಯಲ್ಲಿ ಏನೇನೋ ಮಾಡಲು ಹೊರಟು ನಿಲ್ಲುತ್ತೆ. ವಿಚಿತ್ರವಾದ ಅಜೆಂಡಾವನ್ನು ಇಟ್ಟುಕೊಂಡೆ ಜಗತ್ತಿನ ನಿದ್ದೆಯನ್ನು ಕೆಡಿಸುವ ಹುಚ್ಚು ಹಠವನ್ನು ಮಾಡುತ್ತೆ ಕೆಂಪು ದೇಶ ಚೀನಾ... ಅದಕ್ಕಾಗಿ ಚೀನಾ ವಿಶ್ವದ ದೊಡ್ಡಣ್ಣನಿಗೆ ಶಾಕ್ ಕೊಡಲು ಅದೊಂದು ಅಸ್ತçವನ್ನು ಪ್ರಯೋಗಿಸುತ್ತಿದೆ ಎನ್ನುವ ಟಾಕ್ ಇದೆ. ಅದು ಉತ್ತರ ಕೊರಿಯಾದ ಮೂಲಕ ಅಮೆರಿಕಾಗೆ ಚೀನಾ ಕಂಡ್ರೆ ಆಗಲ್ಲ... ಹಾಗೆ ಚೀನಾಗೂ ದೊಡ್ಡಣ್ಣನನ್ನು ಅತಂತ್ರವಾಗಿಸುವ ದೊಡ್ಡ ಅಜೆಂಡಾ ಇದೆ. ಇದಕ್ಕೆ ಕಾರಣ ಸೂಪರ್ ಪವರ್ ಆಗಬೇಕು ಅನ್ನುವ ಅಹಂ.

ರಷ್ಯಾ, ಅಮೆರಿಕಾ ಚೀನಾ ದೇಶಗಳು ಜಗತ್ತಿನ ಸೂಪರ್ ಪವರ್ ಕಿರೀಟಕ್ಕಾಗಿ ಬಿಗ್‌ಫೈಟ್ ನಡೆಸುತ್ತಾ ಬಂದಿವೆ.. ಈಗಾಗಲೇ ಈ ದಾರಿಯಲ್ಲಿ ಅಮೆರಿಕಾ ಮೊದಲ ಸ್ಥಾನದಲ್ಲಿದೆ. ಅಮೆರಿಕಾದ ಜಾಗವನ್ನು ಅತಿಕ್ರಮಿಸಲು ಚೀನಾಗೆ ಇನ್ನೂ ಬಹಳ ದೂರ ಹೆಜ್ಜೆ ಇಡಬೇಕಾಗಿದೆ. ಅದಕ್ಕಾಗಿ ಒಂದಲ್ಲ ಒಂದು ರೀತಿಯಲ್ಲಿ ಅಮೆರಿಕಾದ ಬಲವನ್ನು ಕುಗ್ಗಿಸಲು ಬೇಜಾನ್ ಕುತಂತ್ರವನ್ನು ಮಾಡುತ್ತಾ ಬಂದಿದೆ.. ಅಪ್‌ಕೋರ್ಸ್ ಈಗಲೂ ಅದೇ ಹಾದಿಯಲ್ಲಿದೆ . ನಾರ್ಥ್ ಕೊರಿಯಾವೂ ಚೀನಾ ಮತ್ತು ರಷ್ಯಾಗೆ ಅತ್ಯಾಪ್ತ ದೇಶ.ಒಂಥರ ಮೂರು ದೇಶಗಳು ಚಡ್ಡಿ ದೋಸ್ತ್ ಇದ್ದಂತೆ. ಏನೇ ಸಮಸ್ಯೆಗಳು ಎದುರಾದರೂ ಒಂದಕ್ಕೊAದು ಸಾಥ್ ಕೊಟ್ಟು, ಮೂಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊAಡು, ಮುಂದಾಗುವ ಅಘಾತವನ್ನು ತಡೆದು ನಿಲ್ಲಿಸುತ್ತವೆ.

ಆದ್ರೆ ರಷ್ಯಾ ಮತ್ತು ಚೀನಾಗಳು ಅಮೆರಿಕಾವನ್ನು ಶತಯಗತಾಯ ಬಗ್ಗುಬಡಿಯಲು ಅಖಾಡಕ್ಕೆ ಇಳಿದಂತಿವೆ.. ಅದರಲ್ಲೂ ಚೀನಾ ಅಂತೂ ದೊಡ್ಡಣ್ಣನಿಗೊಂದು ಮುಕ್ತಿ ಕಾಣಿಸಲೇಬೇಕು ಅಂತ ಡಿಸೈಡ್ ಮಾಡಿದಂತಿದೆ. ಇದಕ್ಕಾಗಿ ತಿಕ್ಕಲು ದೊರೆ ಮೊದಲೇ ಅಮೆರಿಕಾವನ್ನು ಕಂಡ್ರೆ ಗುರ್ ಅನ್ನುವ ಕಿಮ್ ಜಾನ್ ಉನ್‌ನ ತಲೆಗೆ ಹೊಸ ಹುಳ ಬಿಟ್ಟಂತಿದೆ. ಅಮೆರಿಕಾದ ವಿರುದ್ಧ ಉತ್ತರಕೊರಿಯಾವನ್ನು ಎತ್ತಿ ಕಟ್ಟಿದಂತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ