ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಚೇರಿಗೆ ಚೀನಾ ನಿಯೋಗ ಭೇಟಿ ನೀಡಿರುವುದನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದಾರೆ. ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಖರ್ಗೆ ಒಂದೆಡೆ ವಿದೇಶಿ ಸಚಿವಾಲಯವೇ ಚೀನಾದೊಡನೆ ಸಂಬಂಧ ಸರಿಯಿಲ್ಲ ಎಂದು ಮೊದಲ ಬಾರಿಗೆ ಒಪ್ಪಿಕೊಂಡಿದೆ. ಮತ್ತೊಂದೆಡೆ ಚೀನಾ ರಾಜಕಾರಣಿಗಳ ಗುಂಪು ಆರ್‌ಎಸ್‌ಎಸ್ ಕಚೇರಿಗೆ ಭೇಟಿ ನೀಡುತ್ತದೆ. ಏನಿದರ ಮರ್ಮ ಎಂದು ಪ್ರಶ್ನಿಸಿದ್ದಾರೆ.
ಮೊದಲನೆಯದಾಗಿ ಚೀನಾದ ರಾಜತಾಂತ್ರಿಕ ನಿಯೋಗ ಆರ್‌ಎಸ್‌ಎಸ್ ಕಚೇರಿಗೆ ತೆರಳಿದೆ. ಯಾಕೆ ಮತ್ತು ಅಲ್ಲಿ ಏನು ಚರ್ಚೆಯಾಗಿದೆ . ಎರಡನೆಯದಾಗಿ ಪಿಎಲ್‌ಐ ಸ್ಕೀಮ್ ನಲ್ಲಿ ಉತ್ಪಾದನೆಗೆ ಚೀನಾದ ವೃತ್ತಿಪರರು, ತಾಂತ್ರಿಕರಿಗೆ ವೀಸಾ ನೀಡುವಲ್ಲಿ ಮೋದಿ ಸರ್ಕಾರ ರಿಯಾಯಿತಿ ನೀಡಿದೆ ಎಂದು ಖರ್ಗೆ ಆರೋಪಿಸಿದ್ದಾರೆ.