ಎರಡು ರಾಜ್ಯಗಳು ಒಗ್ಗೂಡಿ ಯಮುನಾ ನದಿಯಲ್ಲಿ 45 ದಿನದೊಳಗಾಗಿ ಸ್ವಚ್ಛಗೊಳಿಸಬೇಕು ಎಂದು ದೆಹಲಿ ಹೈಕೋರ್ಟ್ ಸೂಚಿಸಿದೆ.
ದೆಹಲಿ ಜಲ ಮಂಡಳಿ ನೇತೃತ್ವದಲ್ಲಿ 10 ದಿನಗಳ ಕಾರ್ಯತಂತ್ರ ರೂಪಿಸಿ 45 ದಿನದೊಳಗಾಗಿ ಸ್ವಚ್ಛಗೊಳಿಸಬೇಕು ಎಂದು ಆದೇಶಿಸಿದೆ.
ಯಮುನಾ ನದಿ ಕಲುಷಿತಗೊಂಡಿದ್ದು, ಇದನ್ನು ಶುದ್ಧಗೊಳಿಸಲು ನೆರೆಹೊರೆಯ ಎರಡು ರಾಜ್ಯಗಳು ಹಿಂದೇಟು ಹಾಕುತ್ತಿದ್ದು, ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಪಟ್ಟು ಹಿಡಿದಿದ್ದವು. ಈ ಹಿನ್ನೆಲೆಯಲ್ಲ ದೂರು ಆಲಿಸಿದ ನ್ಯಾಯಾಲಯ, ಎರಡೂ ರಾಜ್ಯಗಳು ಸೇರಿ ಯಮುನಾ ನದಿಯನ್ನು ಸ್ವಚ್ಛಗೊಳಿಸಬೇಕು ಎಂದು ಆದೇಶಿಸಿದೆ.