ತ್ರಿವಳಿ ತಲಾಖ್ ವಿರೋಧಿಗಳ ಬಗ್ಗೆ ಸಿಎಂ ಯೋಗಿ ವಿಶಿಷ್ಟ ಹೋಲಿಕೆ

ಸೋಮವಾರ, 17 ಏಪ್ರಿಲ್ 2017 (17:08 IST)
ಲಕ್ನೊ:  ದೇಶದಾದ್ಯಂತ ತ್ರಿವಳಿ ತಲಾಖ್ ಪದ್ಧತಿ ಬಗ್ಗೆ ಚರ್ಚೆಗಳಾಗುತ್ತಿರುವಾಗಲೇ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ವಿಶಿಷ್ಟವಾಗಿ ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ.


ತ್ರಿವಳಿ ತಲಾಖ್ ಪದ್ಧತಿಯನ್ನು ವಿರೋಧಿಸುವವರು ಮತ್ತು ಮೌನವಾಗಿರುವವರು, ದ್ರೌಪದಿಯ ವಸ್ತ್ರಾಪಹರಣದ ಸಂದರ್ಭದಲ್ಲಿ ಮೌನವಾಗಿದ್ದವರಷ್ಟೇ ದೊಡ್ಡ ಅಪರಾಧಿಗಳು ಎಂದಿದ್ದಾರೆ.

ಆ ರೀತಿ ತಪ್ಪು ಮಾಡಿದವರೆಲ್ಲಾ ಮೌನವಾಗಿರುತ್ತಾರೆ ಮತ್ತು ತಪ್ಪಿತಸ್ಥ ಭಾವನೆಯಲ್ಲಿರುತ್ತಾರೆ. ಅದಕ್ಕೇ ಅವರೆಲ್ಲಾ ತ್ರಿವಳಿ ತಲಾಖ್ ಪದ್ಧತಿ ನಿಷೇಧಿಸುವ ಕುರಿತು ಮೌನಕ್ಕೆ ಶರಣಾಗಿದ್ದಾರೆ ಎಂದು ಸಿಎಂ ಸಾಹೇಬರು ಮಹಾಭಾರತಕ್ಕೆ ಹೋಲಿಕೆ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ