ಕೋಕೋಕೋಲಾ, ಥಮ್ಸ್ ಅಪ್ ನಿಷೇಧಿಸುವಂತೆ ಮನವಿ ಮಾಡಿದ ವ್ಯಕ್ತಿಗೆ ದಂಡ

ಶನಿವಾರ, 13 ಜೂನ್ 2020 (08:44 IST)
Normal 0 false false false EN-US X-NONE X-NONE

ನವದೆಹಲಿ : ಕೋಕೋಕೋಲಾ ಮತ್ತು ಥಮ್ಸ್ ಅಪ್ ಪಾನೀಯವನ್ನು ನಿಷೇಧಿಸುವಂತೆ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ ವ್ಯಕ್ತಿಗೆ ಸುಪ್ರೀಂ ಕೋರ್ಟ್ 5 ಲಕ್ಷ ರೂ ದಂಡ ವಿಧಿಸಿದೆ.

 

ಉಮೇದ್ ಸಿನ್ಹಾ ಎಂಬುವವರು ಕೋಕೋಕೋಲಾ ಮತ್ತು ಥಮ್ಸ್ ಅಪ್ ಪಾನೀಯವನ್ನು ನಿಷೇಧಿಸುವಂತೆ ಸುಪ್ರೀಂ ಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

 

ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ, ಪಾನೀಯ ನಿಷೇಧಿಸುವಂತೆ ಕೋರಿ ನೀಡಿದ  ಸಾಕ್ಷ್ಯಗಳು ಪರಿಪೂರ್ಣವಾಗಿಲ್ಲ. ಹಾಗೇ ಎರಡುಬ್ರಾಂಡ್ ಗಳನ್ನು ಮಾತ್ರ ಗುರಿಯಾಗಿಸಿದ್ದು ಯಾಕೆ ಎಂದು ಪ್ರಶ್ನಿಸಿ ಅರ್ಜಿಯನ್ನು ವಜಾಗೊಳಿಸಿದೆ. ಅಲ್ಲದೇ ಕೋರ್ಟಿನ ಸಮಯ ಹಾಳು ಮಾಡಿದ್ದಕ್ಕೆ ವ್ಯಕ್ತಿಗೆ 5 ಲಕ್ಷ ರೂ ದಂಡ ವಿಧಿಸಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ