ಪತಿಯಂತೆ ನಾಟಕವಾಡೆಂದಳು, ಅತ್ಯಾಚಾರ ನಡೆಸಿ ಕೊಲೆ ಬೆದರಿಕೆ ಹಾಕಿದ

ಸೋಮವಾರ, 22 ಆಗಸ್ಟ್ 2016 (11:44 IST)
ಮದುವೆಯಾಗಲು ಇಷ್ಟವಿಲ್ಲದ 22 ವರ್ಷದ ಯುವತಿಯೋರ್ವಳು ತಂದೆ-ತಾಯಿಗಳಿಗೆ ಬೇಸರವಾಗುತ್ತದೆ ಎಂದು ತನ್ನ ಗೆಳೆಯನನ್ನೇ ಪತಿ ಎಂದು ಪರಿಚಯಿಸಿದಳು. ಆದರೆ ಆಕೆ ಮಾಡಿದ ಸಣ್ಣ ತಪ್ಪು ದೊಡ್ಡ ಅನಾಹುತವನ್ನೇ ಸೃಷ್ಟಿಸಿತು. ಮತ್ತೀಗ ಆಕೆ ನ್ಯಾಯ ಕೋರಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಅಂತಹದ್ದೇನಾಯಿತು ತಿಳಿಯಲು ಮುಂದೆ ಓದಿ. 
 
ಎಪ್ರೀಲ್ ಮತ್ತು ಜುಲೈ ತಿಂಗಳ ನಡುವೆ ಮುಂಬೈನ ವಡಗಾಂ ಪ್ರದೇಶದಲ್ಲಿ  ಈ ಘಟನೆ ನಡೆದಿದ್ದು, ಬಹಳ ತಡವಾಗಿ ಬೆಳಕಿಗೆ ಬಂದಿದೆ.
 
ಮುಂಬೈ ನಿವಾಸಿಯಾದ ಪೀಡಿತೆ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತ ಓದನ್ನು ಮುಂದುವರೆಸಿದ್ದಳು. ತಂದೆ ಆಕೆಯನ್ನು ಮದುವೆ ಮಾಡಿಸಲು ಯತ್ನಿಸಿದಾಗ ಆಕೆಗದು ಸುತಾರಾಂ ಇಷ್ಟವಿರಲಿಲ್ಲ. ತನ್ನ ಗೆಳೆಯರೊಂದಿಗೆ ಈ ವಿಚಾರವನ್ನು ಚರ್ಚೆ ಮಾಡಿದಾಗ ಆಕೆಯ ಗೆಳೆಯ ಯಾರಾದರನ್ನು ಪತಿಯಂತೆ ನಟಿಸುವಂತೆ ಕೇಳಿಕೋ ಎಂಬ ಐಡಿಯಾವನ್ನು ನೀಡಿದ. ಅದಕ್ಕೊಪ್ಪಿದ ಆಕೆ ನಕಲಿ ಪತಿಯ ಪಾತ್ರ ನಿರ್ವಹಿಸಲು ಆತನನ್ನೇ ಕೇಳಿಕೊಂಡಳು. ಮೂಲತಃ ಅಹಮದ್ ನಗರದವನಾದ ಆಕೆ ಆಕೆಯ ಬೇಡಿಕೆಗೆ ಒಪ್ಪಿಕೊಂಡ. 
 
ಎಪ್ರಿಲ್ ತಿಂಗಳಲ್ಲಿ ನಾನು ಮದುವೆಯಾಗಿದ್ದೇವೆ ಎಂದು ಆಕೆ ತಂದೆ-ತಾಯಿಗಳ ಬಳಿ ಹೇಳಿದ್ದಾಳೆ. ನಕಲಿ ಪತಿ ಮತ್ತು ನಕಲಿ ದಾಖಲೆಗಳನ್ನು ಸಹ ತೋರಿಸಿದ್ದಾಳೆ, ಬಳಿಕ ಅವರಿಬ್ಬರು ಪುಣೆಗೆ ಹೊರಟು ಹೋದರು. ಸ್ವಲ್ಪ ದಿನವಾದ ನಂತರ ಆಕೆಯ ಸ್ನೇಹಿತ ತಾನು ಆಕೆಯ ನಿಜವಾದ ಪತಿಯಂತೆ ವರ್ತಿಸ ತೊಡಗಿದ್ದಾನೆ. ಆಕೆಗೆ ಗೊತ್ತಿಲ್ಲದಂತೆ ತಮ್ಮಿಬ್ಬರ ಮದುವೆ ಪ್ರಮಾಣ ಪತ್ರವನ್ನು ಮಾಡಿಸಿ ಆಕೆಯ ಮೇಲೆ ಅತ್ಯಾಚಾರವೆಸಿದ್ದಾನೆ. ಇದರಿಂದ ನೊಂದ ಆಕೆ ಪೋಷಕರ ಬಳಿ ಮರಳಿದ್ದಾಳೆ. ಆದರೆ ಆಕೆಯನ್ನು ಬಿಡಲು ಸಿದ್ಧವಿಲ್ಲದ ಆತ ನನ್ನ ಜತೆ ಜೀವನ ನಡೆಸಲು ನಿರಾಕರಿಸಿದರೆ ನಿನ್ನ ತಂದೆ-ತಾಯಿಗಳನ್ನು ಕೊಲ್ಲುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ.
 
ಈ ಎಲ್ಲ ಘಟನಾವಳಿಗಳಿಂದ ಆಘಾತಕ್ಕೀಡಾದ ಯುವತಿ ಈಗ ಮುಂಬೈ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

ವೆಬ್ದುನಿಯಾವನ್ನು ಓದಿ