India Pakistan Operation Sindoor: ಭಾರತ ದಾಳಿ ನಡೆಸಿದ 9 ಸ್ಥಳಗಳು ಯಾವುದೆಲ್ಲಾ
ರಫೇಲ್ ಯುದ್ಧ ವಿಮಾನ ಬಳಸಿ ಭಾರತೀಯ ವಾಯುಸೇನೆ ಮಿಂಚಿನ ವೇಗದಲ್ಲಿ ರಾತ್ರಿ 1.45 ರ ಸುಮಾರಿಗೆ ದಾಳಿ ನಡೆಸಿದೆ. ಇದಾದ ತಕ್ಷಣವೇ ಸೇನೆ ಟ್ವೀಟ್ ಮಾಡಿದ್ದು ಆಪರೇಷನ್ ಸಿಂದೂರ್, ಜಸ್ಟಿಸ್ ಸರ್ವ್ಡ್ ಎಂದಿದೆ.
ಭಾರತ ಕೇವಲ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮಾತ್ರವಲ್ಲ, ಪಾಕಿಸ್ತಾನ ನೆಲದಲ್ಲೂ ದಾಳಿ ನಡೆಸಿ ಬಂದಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಐದು ಕಡೆ ಮತ್ತು ಪಾಕಿಸ್ತಾನದ ನಾಲ್ಕು ಕಡೆ ಸೇನೆ ದಾಳಿ ನಡೆಸಿದೆ.
ಪಾಕಿಸ್ತಾನದ ಬಹಲ್ವಾಪುರ್, ಮುರಿಡ್ಕೆ ಮತ್ತು ಸಿಯಾಲ್ ಕೋಟ್ ನಲ್ಲೂ ಭಾರತ ದಾಳಿ ನಡೆಸಿದೆ. ಈ ದಾಳಿಗೆ ಭಾರತೀಯ ಸೇನೆಯ ಮೂರೂ ಪಡೆಗಳೂ ಸಾಥ್ ನೀಡಿವೆ. ಉಗ್ರರ ಅಡುಗುದಾಣಗಳನ್ನು ಗುರುತಿಸಿ ಹೊಡೆಯಲು ಈ ಮೂರೂ ಸೇನೆ ಸಾಥ್ ನೀಡಿವೆ.