ಅಪೌಷ್ಠಿಕ ಮಕ್ಕಳೇ ಕೊರೋನಾ ಮೂರನೇ ಅಲೆಯ ಟಾರ್ಗೆಟ್
ಆರೋಗ್ಯ ತಜ್ಞರ ಪ್ರಕಾರ ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಲಿದೆ. ಅದಕ್ಕಾಗಿ ಈಗಾಗಲೇ ಮಕ್ಕಳಿಗೂ ಲಸಿಕೆ ತಯಾರಿಕೆ ಈಗಾಗಲೇ ಪ್ರಾಯೋಗಿಕ ಹಂತದಲ್ಲಿದೆ. ತಜ್ಞರ ಪ್ರಕಾರ, ಮಕ್ಕಳಲ್ಲಿ ಅದರಲ್ಲೂ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಲ್ಲಿ ಕೊರೋನಾ ಮೂರನೇ ಅಲೆ ಹೆಚ್ಚು ಪರಿಣಾಮ ಬೀರಲಿದೆ. ಇಂತಹ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ. ಹೀಗಾಗಿ ಇವರನ್ನು ಮೂರನೇ ಅಲೆ ಹೆಚ್ಚು ಬಾಧಿಸಲಿದೆ ಎನ್ನಲಾಗಿದೆ. ಹೀಗಾಗಿ ಮಕ್ಕಳ ಬಗ್ಗೆ ಎಚ್ಚರವಾಗಿರಿ.