ದೇಶದಾದ್ಯಂತ ಹೆಚ್ಚುತ್ತಲೇ ಇದೆ ಕೋವಿಡ್‌ ಕೇಸ್‌: ಕೇರಳದಲ್ಲೇ 1,400ಕ್ಕೂ ಅಧಿಕ ಸಕ್ರಿಯ ಪ್ರಕರಣ

Sampriya

ಸೋಮವಾರ, 2 ಜೂನ್ 2025 (14:32 IST)
ನವದೆಹಲಿ: ಐದು ವರ್ಷಗಳ ಹಿಂದೆ ಇಡೀ ಜಗತ್ತನ್ನೇ ತಲ್ಲಣಗೊಳಿಸಿದ್ದ ಕೋವಿಡ್‌ 19 ಹೊಸ ರೂಪದಲ್ಲಿ ಮತ್ತೆ ಆವರಿಸಿದೆ. ದೇಶದಲ್ಲಿ ದಿನದಿಂದ ದಿನಕ್ಕೆ ಕೋವಿಡ್‌ ಪ್ರಕರಣ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. 

ದೇಶದಲ್ಲಿ ಸಕ್ರಿಯ ಕೇಸ್‌ಗಳ ಸಂಖ್ಯೆ 4 ಸಾವಿರದ ಸಮೀಪದಲ್ಲಿದೆ. ಈ ಪೈಕಿ ಕೇರಳದಲ್ಲಿಯೇ ಬರೋಬ್ಬರಿ 1,400 ಸಕ್ರಿಯ ಪ್ರಕರಣಗಳು ಪತ್ತೆಯಾಗಿದೆ. ಅಲ್ಲದೆ, ಮಹಾರಾಷ್ಟ್ರ 506, ದೆಹಲಿ 483, ಗುಜರಾತ್ 338, ಪಶ್ಚಿಮ ಬಂಗಾಳ 331, ಕರ್ನಾಟಕ 253, ತಮಿಳುನಾಡು 189, ಉತ್ತರ ಪ್ರದೇಶ 157 ಪ್ರಕರಣಗಳು ದಾಖಲಾಗಿವೆ.

ದೇಶದಲ್ಲಿ ಸೋಮವಾರ 3,961 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಅತೀ ಹೆಚ್ಚು ಪ್ರಕರಣಗಳು ಕೇರಳದಲ್ಲಿ ವರದಿಯಾಗುತ್ತಿವೆ. ಕಳೆದ 24 ಗಂಟೆಯಲ್ಲಿ ತಮಿಳುನಾಡು, ಕೇರಳ, ಮಹಾರಾಷ್ಟ್ರ ಹಾಗೂ ದೆಹಲಿಯಲ್ಲಿ ತಲಾ ಒಬ್ಬೊಬ್ಬರಂತೆ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. 
 

ಕೋವಿಡ್‌ನ ರೂಪಾಂತರಿಯ ರೂಪ ದೇಶದಲ್ಲಿ ಕಂಡುಬಂದಿವೆ. ನಾವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಸದ್ಯಕ್ಕೆ ಯಾವುದೇ ಗಂಭೀರ ಪರಿಣಾಮ ಬೀರಿಲ್ಲ. ನಾವೆಲ್ಲರೂ ಜಾಗರೂಕರಾಗಿರಬೇಕು. ಆದರೆ ಆತಂಕಪಡುವಂತದ್ದು ಏನಿಲ್ಲ ಎಂದು 
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಮಹಾನಿರ್ದೇಶಕ ಡಾ.ರಾಜೀವ್ ಬೆಹ್ಲ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ