ಗೋಮೂತ್ರ ಮಾನವ ಸೇವನೆಗೆ ಯೋಗ್ಯವಲ್ಲ!

ಸೋಮವಾರ, 17 ಏಪ್ರಿಲ್ 2023 (09:29 IST)
ಲಕ್ನೋ : ಗೋವು ಪವಿತ್ರ.. ಗೋಮೂತ್ರ ಸೇವನೆಯಿಂದ ರೋಗರುಜಿನ ವಾಸಿಯಾಗುತ್ತದೆ. ಗೋಮೂತ್ರ ಸೇವನೆಯಿಂದ ಚರ್ಮಕ್ಕೆ ನಾನಾ ಪ್ರಯೋಜನಗಳಿವೆ ಎಂದು ನಂಬಿದ್ದ ಹಿಂದೂಪರವಾದಿಗಳಿಗೆ ಬಿಗ್ ಶಾಕ್ ನೀಡುವ ಸುದ್ದಿ ವರದಿಯಾಗಿದೆ.
 
ಮಾನವರಿಗೆ ಗೋಮೂತ್ರ ಸೇವನೆ ಯೋಗ್ಯವಲ್ಲ ಎಂದು ಐವಿಆರ್ಐ ಅಧ್ಯಯನವೊಂದು ತಿಳಿಸಿದೆ. ಅಷ್ಟೇ ಅಲ್ಲ, ಗೋಮೂತ್ರಕ್ಕೆ ಹೋಲಿಸಿದರೆ ಎಮ್ಮೆಯ ಮೂತ್ರವೇ ಉತ್ತಮ ಎಂದು ವಿಶ್ಲೇಷಿಸಿದೆ.

ದಶಕಗಳಿಂದ ಪವಾಡ ಸದೃಶ ಔಷಧಿ ಎಂದು ಹೇಳಲಾಗುತ್ತಿರುವ ಗೋಮೂತ್ರವು ಹಾನಿಕಾರಕ ಬ್ಯಾಕ್ಟೀರಿಯಾವನ್ನು ಹೊಂದಿದೆ. ಹೀಗಾಗಿ ಇದು ನೇರವಾಗಿ ಮಾನವ ಬಳಕೆಗೆ ಸೂಕ್ತವಲ್ಲ ಎಂದು ದೇಶದ ಪ್ರಮುಖ ಪ್ರಾಣಿ ಸಂಶೋಧನಾ ಸಂಸ್ಥೆಯಾದ ಬರೇಲಿ ಮೂಲದ ಇಂಡಿಯನ್ ವೆಟರ್ನರಿ ರಿಸರ್ಚ್ ಇನ್ಸ್ಟಿಟ್ಯೂಟ್ ಅಧ್ಯಯನದ ವರದಿ ತಿಳಿಸಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ