ಮದುವೆಯಾದ್ಮೇಲೂ ಮತ್ತಿಬ್ಬರೊಂದಿಗೆ ಲವ್ವಿ ಡವ್ವಿ ! ಆ ಪ್ರಿಯಕರ ಮಾಡಿದ್ದಾದ್ರು ಏನು?

ಶುಕ್ರವಾರ, 8 ಸೆಪ್ಟಂಬರ್ 2023 (12:54 IST)
ಬೆಂಗಳೂರು : ಇಲ್ಲಿನ ಬಾಗಲಗುಂಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ತಾಯಿ-ಮಗು ಹತ್ಯೆ ಪ್ರಕರಣದಲ್ಲಿ ಸ್ಫೋಟಕ ಸತ್ಯ ಬಯಲಾಗಿದ್ದು, ಮೃತಳ ಪ್ರಿಯಕರ ಶೇಖರ್ನನ್ನ ಪೊಲೀಸರು ಬಂಧಿಸಿದ್ದಾರೆ.

ಕಳೆದ ಎರಡು ದಿನಗಳ ಹಿಂದೆಯಷ್ಟೇ ನವನೀತ (35) ಹಾಗೂ ಪುತ್ರ ಸಾಯಿ ಸೃಜನ್ (8) ಹತ್ಯೆಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತಳ ಪ್ರಿಯಕರ ಶೇಖರ್ನನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಕೊಲೆಯಾದ ಮಹಿಳೆ ನವನೀತ ತನ್ನ ಪತಿ ಚಂದ್ರುವಿನಿಂದ ಬೇರ್ಪಟ್ಟು ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಕಳೆದ 2 ವರ್ಷಗಳಿಂದ ಮಗ ಸಾಯಿ ಸೃಜನ್ ಜೊತೆಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ನವನೀತ ಗಂಡಿನಿಂದ ದೂರಾದ ಮೇಲೆ ಆರೋಪಿ ಶೇಖರ್ ಜೊತೆಗೆ ಸ್ನೇಹ ಬೆಳೆಸಿದ್ದಳು. ಬಳಿಕ ಇಬ್ಬರು ಪ್ರೀತಿ ಮಾಡೋಕೆ ಶುರು ಮಾಡಿದ್ದರು.

ಆದ್ರೆ ನವನೀತ ಇತ್ತೀಚೆಗೆ ಶೇಖರ್ ಬಿಟ್ಟು ಲೋಕೇಶ್ ಎಂಬಾತನೊಂದಿಗೆ ಸಂಪರ್ಕ ಹೊಂದಿದ್ದಳು. ಇದನ್ನ ಕಂಡ ಮೊದಲ ಪ್ರಿಯಕರ ಶೇಖರ್ ನವನೀತಳಿಗೆ ವಾರ್ನಿಂಗ್ ಕೊಟ್ಟಿದ್ದಾನೆ. ಲೋಕೇಶ್ ಸಹವಾಸ ಬಿಡುವಂತೆ ಎಚ್ಚರಿಕೆ ಕೊಟ್ಟಿದ್ದಾನೆ, ಆಕೆ ಮೇಲೆ ಹಲ್ಲೆಯನ್ನೂ ಮಾಡಿದ್ದಾನೆ. ಆದರೂ ನನವನೀತ ಲೋಕೇಶ್ ಜೊತೆಗೆ ಸಂಪರ್ಕ ಹೊಂದಿದ್ದಳು.

ಇದರಿಂದ ಬೇಸತ್ತಿದ್ದ ಶೇಖರ್ ಶನಿವಾರ ಎಂದಿನಂತೆ ನವನೀತಳ ಮನೆಗೆ ಬಂದಿದ್ದಾನೆ. ನವನೀತಳ ಮಗನಿಗೆ ಜ್ಯೂಸ್ ತೆಗೆದುಕೊಂಡು ಬರುವಂತೆ ಹೇಳಿದ್ದಾನೆ. ಈ ವೇಳೆ ಆಕೆಯೊಂದಿಗೆ ಜಗಳ ಶುರು ಮಾಡಿ, ಚಾಕುವಿನಿಂದ ಕುತ್ತಿಗೆ ಹಿರಿದು ಕೊಲೆ ಮಾಡಿದ್ದಾನೆ. ನಂತರ ಅಂಗಡಿಯಿಂದ ಜ್ಯೂಸ್ ತೆಗೆದುಕೊಂಡುಬಂದ ಮಗುವಿಗೆ ಮ್ಯಾಜಿಕ್ ಹೇಳಿಕೊಡುತ್ತೇನೆ ಎಂದು ನಂಬಿಸಿ, ಸೀರೆಯಿಂದ ಮಗುವಿನ ಎರಡೂ ಕೈಕಾಲುಗಳನ್ನು ಕಟ್ಟಿದ್ದಾನೆ. ತಲೆ ದಿಂಬಿನಿಂದ ಉಸಿರುಗಟ್ಟಿಸಿ ಬಾಲಕನನ್ನೂ ಕೊಲೆ ಮಾಡಿದ್ದಾನೆ. ಎರಡು ಮೃತ ದೇಹಗಳನ್ನ ರೂಮಿನಲ್ಲಿ ಮಂಚದ ಮೇಲೆ ಎಸೆದು ಪರಾರಿಯಾಗಿದ್ದಾನೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ