ದೇಶದಲ್ಲಿ ಕೊರೊನಾಗೆ ಮತ್ತಿಬ್ಬರು ಬಲಿ; ಸಾವಿನ ಸಂಖ್ಯೆ 40ಕ್ಕೆ ಏರಿಕೆ

ಮಂಗಳವಾರ, 31 ಮಾರ್ಚ್ 2020 (10:19 IST)
ನವದೆಹಲಿ : ದೇಶದಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮೇರೆಯುತ್ತಿದ್ದು, ಇದೀಗ ದೇಶದಲ್ಲಿ ಕೊರೊನಾಗೆ ಮತ್ತಿಬ್ಬರು ಬಲಿಯಾಗಿದ್ದಾರೆ.


ಕೇರಳದಲ್ಲಿ ಕೊರೊನಾ ಗೆ 68 ವರ್ಷದ ವೃದ್ಧ ಸಾವನಪ್ಪಿದ್ದು, ಆ ಮೂಲಕ ಕೇರಳದಲ್ಲಿ ಕೊರೊನಾ 2 ನೇ ಬಲಿಪಡೆದುಕೊಂಡಂತಾಗಿದೆ. ವೃದ್ಧ ತಿರುವನಂತಪುರಂನಲ್ಲಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅವರು ಆಸ್ಪತ್ರೆಯಲ್ಲಿಯೇ ಸಾವನಪ್ಪಿದ್ದಾರೆ. 


ಹಾಗೇ ಪಶ್ಚಿಮ ಬಂಗಾಳದಲ್ಲಿ ಕೊರೊನಾಗೆ ವ್ಯಕ್ತಿಯೊಬ್ಬ ಸಾವನಪ್ಪಿದ್ದು, ಆ ಮೂಲಕ ಪಶ್ಚಿಮ ಬಂಗಾಳದಲ್ಲಿ ಕೊರೊನಾ 3 ನೇ ಬಲಿ ಪಡೆದುಕೊಂಡಿದೆ. ಭಾರತದಲ್ಲಿ ಈವರೆಗೆ ಕೊರೊನಾ ದಿಂದ ಸಾವನಪ್ಪಿದವರ ಸಂಖ್ಯೆ 40ಕ್ಕೆ ಏರಿಕೆಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ