ಸಾವಿನ ಸಂಖ್ಯೆ 41 ಸಾವಿರಕ್ಕೆ ಏರಿಕೆ
ಟರ್ಕಿ ಭೂಕಂಪದಲ್ಲಿ ಬಲಿಯಾಗಿರುವವರ ಸಂಖ್ಯೆ, ಇತ್ತೀಚಿನ ಮಾಹಿತಿ ಪ್ರಕಾರ 41 ಸಾವಿರ ಗಡಿ ದಾಟಿದೆ. ಟರ್ಕಿ ದೇಶವೊಂದರಲ್ಲೇ 32 ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ. ಇನ್ನೂ ಕೂಡ ಕಟ್ಟಡ ತೆರವು ಕಾರ್ಯಾಚರಣೆಗಳು ನಡೆಯುತ್ತಿದ್ದು, ಈಗಲೂ ಸಾವಿನ ಸಂಖ್ಯೆ ಕ್ಷಣಕ್ಷಣಕ್ಕೂ ಏರಿಕೆ ಆಗುತ್ತಿದೆ. ಫೆಬ್ರುವರಿ 6ರಂದು ಟರ್ಕಿಯಲ್ಲಿ ಒಂದೇ ದಿನ ನಾಲ್ಕು ಭೂಕಂಪ ಸಂಭವಿಸಿತ್ತು. ಅದರಲ್ಲಿ ಮೊದಲೆರಡು ಭೂಕಂಪಗಳ ತೀವ್ರತೆ 7.5ಕ್ಕೂ ಹೆಚ್ಚು ಇತ್ತು. ಈ ಭೂಕಂಪವಾದ ಸ್ಥಳದಿಂದ 100 ಕಿಮೀ ಆಸುಪಾಸು ಪ್ರದೇಶಗಳು ಸ್ಮಶಾನದಂತಾಗಿವೆ. ಪೋಲಾಟ್ ಎಂಬ ಗ್ರಾಮದಲ್ಲಿ ಎಲ್ಲಾ ಮನೆಗಳೂ ನೆಲಸಮಗೊಂಡಿವೆ. ಗ್ರಾಮಸ್ಥರು ತಮ್ಮ ಮನೆಯಲ್ಲಿ ಅಳಿದುಳಿದ ವಸ್ತುಗಳನ್ನು ಸಂಗ್ರಹಿಸುತ್ತಿರುವ ದೃಶ್ಯ ಕರುಳು ಹಿಂಡುವಂತಿದೆ.