ಮಹಾರಾಷ್ಟ್ರದಲ್ಲಿ ಎನ್ ಸಿಪಿ ಜತೆ ಬಿಜೆಪಿ ಮೈತ್ರಿ..?

ಶನಿವಾರ, 28 ಅಕ್ಟೋಬರ್ 2017 (09:18 IST)
ಮುಂಬೈ: ಮಹಾರಾಷ್ಟ್ರದಲ್ಲಿ ಶಿವಸೇನೆ ಹಾಗೂ ಬಿಜೆಪಿ ಮಧ್ಯೆ ವಾಕ್ ಸಮರ ತಾರಕಕ್ಕೇರಿದೆ. ಬಿಜೆಪಿ ಜತೆಗೆ ಮೈತ್ರಿ ಮುಂದುವರಿಸಬೇಕೆ ಅಥವಾ ಬೇಡವೇ ಎಂಬುದನ್ನು ಶಿವಸೇನೆ ಮುಖ್ಯಸ್ಥ ಉದ್ಧವ್‌ ಠಾಕ್ರೆ ನಿರ್ಧರಿಸಬೇಕು ಎಂದು ಮಹಾರಾಷ್ಟ್ರ ಸಿಎಂ ದೇವೇಂದ್ರ ಫ‌ಡ್ನವೀಸ್‌ ಹೇಳಿದ್ದಾರೆ.

ಇದರ ಮಧ್ಯೆ ಬಿಜೆಪಿ ಶಿವಸೇನೆ ಜತೆ ಮೈತ್ರಿ ಮುರಿದುಕೊಂಡರೆ, ಬೇರೆ ಯಾವ ಪಕ್ಷದ ಜತೆ ಮೈತ್ರಿ ಮಾಡಿಕೊಳ್ಳಲಿದೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ. ನಿನ್ನೆ ಶಿವಸೇನೆ ವಿಚಾರವಾಗಿ ಮಾತನಾಡುತ್ತಿದ್ದ ಸಿಎಂ ದೇವೇಂದ್ರ ಫಡ್ನವೀಸ್, ಎನ್‌ ಸಿಪಿ ಮುಖಂಡ ಶರದ್‌ ಪವಾರ್‌ ರನ್ನು ಹೊಗಳಿದ್ದಾರೆ. ಪವಾರ್‌ ಎಂದಿಗೂ ಅಭಿವೃದ್ಧಿ ವಿಚಾರಕ್ಕೆ ಬಂದರೆ ಮಿತಿ ಮೀರಿ ವಿರೋಧ ಮಾಡಿದವರಲ್ಲ ಎಂದು ಹೇಳಿದ್ದಾರೆ.

ಶರದ್ ಪವಾರ್ ಎಂದಿಗೂ ಅಭಿವೃದ್ಧಿಯನ್ನು ವಿರೋಧಿಸಿಲ್ಲ. ಆದರೆ ಎನ್‌ಸಿಪಿ ಜತೆಗಿನ ನಮ್ಮ ಅಂತರ ಮುಂದುವರಿಯಲಿದೆ ಎಂದು ಹೇಳಿದ್ದಾರೆ. ಈ ನಿಟ್ಟಿನಲ್ಲಿ ಶಿವಸೇನೆ ಜತೆ ಬಿಜೆಪಿ ಮೈತ್ರಿ ಮುರಿದುಕೊಂಡರೆ ಎನ್ ಸಿಪಿ ಜತೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗ್ತಿದೆ.

ಶಿವಸೇನೆ ವಕ್ತಾರ ಸಂಜತ್ ರಾವತ್ ತಮ್ಮ ಭಾಷಣದಲ್ಲಿ ರಾಹುಲ್ ಗಾಂಧಿ ಬಗ್ಗೆ ಗುಣಗಾನ ಮಾಡಿದ್ದರು. ದೇಶದಲ್ಲಿ ಮೋದಿ ಅಲೆ ಮುಗಿದಿದ್ದು, ರಾಹುಲ್ ದೇಶವನ್ನ ಮುನ್ನಡೆಸಲು ಸಮರ್ಥ ಎಂದಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ