ಚೀನಾ ಸೈನಿಕರಿಗೆ ನಮಸ್ತೆ ಹೇಳಲು ಕಲಿಸಿಕೊಟ್ಟ ರಕ್ಷಣಾ ಸಚಿವೆ
ಚೀನಾ ಯೋಧರೊಂದಿಗೆ ಸೌಹಾರ್ದಯುತ ಮಾತುಕತೆ ನಡೆಸಿದ ಸಚಿವೆ ನಿರ್ಮಲಾ ಪರಸ್ಪರ ಪರಿಚಯ ಮಾಡಿಕೊಂಡರಲ್ಲದೆ, ಸ್ನೇಹ ಸಂವಾದ ನಡೆಸಿದರು. ಭಾರತ ಮತ್ತು ಚೀನಾ ನಡುವೆ ಇತ್ತೀಚೆಗೆ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರ ಬೆನ್ನಲ್ಲೇ ಭಾರತದ ರಕ್ಷಣಾ ಸಚಿವೆಯ ಈ ಸ್ನೇಹ ಭೇಟಿ ವಿಶೇಷವಾಗಿತ್ತು.